ಬಾಲಿವುಡ್ ನಟಿ ಆತ್ಮಹತ್ಯೆ

19 Jul 2017 10:40 AM | Entertainment
536 Report

ಗುರುಗ್ರಾಮ್ : ಬಾಲಿವುಡ್ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರ್ಯಾಣದ ಗುರೂಗ್ರಾಮ ಬಳಿ ನಡೆದಿದೆ. ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಜತೆಗೆ ಜಗ್ಗಾ ಜಾಸೂಸ್ ಚಿತ್ರದಲ್ಲಿ ಅಭಿನಯಿಸಿದ್ದ ಬಿದಿಶಾ ಬೆಡಬರವೂ ಗುರು ಗ್ರಾಮ್ ನ ಅಪಾರ್ಟ್ ಮೆಂಟ್ ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸ್ಸಾಮಿ ಭಾಷೆಯ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಲ್ಲದೆ ಗಾಯಕಿಯೂ ಕೂಡ ಆಗಿದ್ದರು. ತಮ್ಮ ಪತಿ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ವಿಚ್ಛೇದನ ಬಯಸಿದ್ದರು. ಅಲ್ಲದೇ ತಮ್ಮ ಸ್ನೇಹಿತರು ಕುಟುಂಬ ವರ್ಗದವರಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

Edited By

venki swamy

Reported By

Sudha Ujja

Comments