ಸಿನಿಮಾ ನೋಡಲು ಬಂದಿದ್ದ ನಟಿಗೆ ಕಿರುಕುಳ

18 Jul 2017 11:40 AM | Entertainment
652 Report

ಮುಂಬೈ: ಸಿನಿಮಾ ನೋಡಲು ಪುತ್ರಿ ಜತೆ ಚಿತ್ರಮಂದಿರಕ್ಕೆ ಬಂದಿದ್ದ ಮರಾಠಿ ಸಿನಿಮಾ ನಟಿ ಪ್ರಿಯಾ ಬೆರ್ಡೆಗೆ ದುಷ್ಕರ್ಮಿಯೊಬ್ಬ ಕಿರುಕುಳ ನೀಡಿದ್ದಲ್ಲದೆ, ಹಲ್ಲೆಗೆ ಮುಂದಾದ ಘಟನೆ ವರದಿಯಾಗಿದೆ.

ಮರಾಠಿ ಸಿನಿಮಾ ರಂಗದ ಜನಪ್ರಿಯ ನಟಿ 49 ವರ್ಷದ ಪ್ರಿಯಾ ಪುತ್ರಿ ಜತೆಗೆ ಸಿನಿಮಾ ನೋಡುತ್ತಿದ್ದಾಗ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಕಿರಿ ಕಿರಿ ಮಾಡುತ್ತಿದ್ದ. ಅಲ್ಲದೆ, ನಟಿ ಮತ್ತು ಪುತ್ರಿಯ ಮೇಲೆ ದೈಹಿಕವಾಗಿ ಎರಗಲು ಮುಂದಾದ. ಈ ಸಂದರ್ಭದಲ್ಲಿ ನಟಿ ಪ್ರಿಯಾ ಆತನ ಬಗ್ಗೆ ಚಿತ್ರಮಂದಿರದ ಭದ್ರತಾ ಸಿಬ್ಬಂದಿಗಳಿಗೆ ದೂರು ನೀಡಿದ್ದಾರೆ ಎಂದು ಮರಾಠಿ ಪತ್ರಿಕೆಯೊಂದು ವರದಿ ಮಾಡಿದೆ. ತಕ್ಷಣ ಆತನನ್ನು ಹೊರಗೆಳೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

Edited By

venki swamy

Reported By

Sudha Ujja

Comments