ನಟಿ ಭಾವನಾಗೆ ಕೆಪಿಸಿಸಿ ಕಾರ್ಯದರ್ಶಿ ಸ್ಥಾನ

14 Jul 2017 12:19 PM | Entertainment
617 Report

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೆಪಿಸಿಸಿ ಪುನಾರಚನೆ ಮಾಡಿ ಆದೇಶ ಹೊರಡಿಸಿದ್ದು. ಇದೀಗ ನೂತನ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಖ್ಯಾತ ಚಿತ್ರನಟಿ ಭಾವನಾಗೆ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ.

ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತ ತಾರೆ ಹಾಗೂ ರಾಜಕಾರಣಿಯಾಗಿರುವ ಭಾವನಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಅವರಿಗೆ ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ಅರಸಿ ಬಂದಿದೆ.

ಖ್ಯಾತ ಚಿತ್ರನಟ ದರ್ಶನ್ ಅವರ ತಾಯಿ, ಮೀನಾ ತೂಗದೀಪ್ ಕೂಡಾ ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಎಐಸಿಸಿ, ಕೆಪಿಸಿಸಿ ಪುನಾರಚನೆಯಲ್ಲಿ ಕೆಪಿಸಿಸಿಗೆ 17 ಉಪಾಧ್ಯಕ್ಷ ಸ್ಥಾನ, 57 ಪ್ರಧಾನ ಕಾರ್ಯದರ್ಶಿಗಳ ಸ್ಥಾನ ಮತ್ತು 96 ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

Edited By

Shruthi G

Reported By

Sudha Ujja

Comments