ಸಲ್ಮಾನ್ 'ಹ್ಯೂಮೆನ್ ಬೀಯಿಂಗ್' ಇ-ಸೈಕಲ್ ಬಿಡುಗಡೆ

06 Jun 2017 1:19 PM | Entertainment
409 Report

ಮುಂಬೈ: ವಿಶ್ವ ಪರಿಸರ ದಿನದಂದು ನಟ ಸಲ್ಮಾನ್ ಖಾನ್ 'ಹ್ಯೂಮನ್ ಬೀಯಿಂಗ್' ಬ್ರಾಂಡ್ ಅಡಿಯಲ್ಲಿ ಇ- ಸೈಕಲ್ ಪ್ರಾರಂಭಿಸಿದ್ದಾರೆ. ಎರಡು ರೀತಿಯ ವೈರಟಿ ಸೈಕಲ್ ಗಳಾಗಿದ್ದು, ಬಿಳಿ, ಹಳದಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಕಾರುಗಳು ಲಭ್ಯವಿರಲಿವೆ. ಸೈಕಲ್ ನ ಮಾರಾಟ ಬೆಲೆ ಕೆಲ ದಿನಗಳಲ್ಲೇ ಬಿಡುಗಡೆಯಾಗಲಿದೆ.

ಈ ಕುರಿತು ಟ್ವಿಟರ್ ನಲ್ಲಿ ಸಲ್ಮಾನ್ ಖಾನ್ ಶೇರ್ ಮಾಡಿದ್ದು, ಅತಿ ಶೀರ್ಘದಲ್ಲೇ ಇ-ಸೈಕಲ್ ಆರಂಭವಾಗಲಿವೆ ಎಂದಿದ್ದಾರೆ. ಈ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿರುವ ಸಲ್ಮಾನ್, ಜನ ಸುದೀರ್ಘ ಪ್ರಯಾಣ ಬೆಳೆಸಲು ಸೈಕಲ್ ಮೇಲೆ ಪ್ರಯಾಣ ಬೆಳೆಸಲು ಇಷ್ಟಪಡುವುದಿಲ್ಲ. ಆದರೆ ಸುಲಭ ಪೈಡಲ್ ಹಾಗೂ ರೀಚಾರ್ಚ್ ಮೋಟಾರ ಇದ್ದರೆ ನಗರಗಳಿಗೆ ಹಾಗೂ ಹಳ್ಳಿಗಳಿಗೆ ಈ ಸೈಕಲ್ ಗಳು ಉಪಯೋಗವಾಗಲಿವೆ ಎಂದರು.

ಪ್ರಮಾಣಿತ  ಇ-ಸೈಕಲ್ ನ ಗರಿಷ್ಠ ವೇಗ ಪ್ರತಿ ಗಂಟೆಗೆ ೨೫ ಕಿಲೋಮೀಟರ್ ಇರಲಿದ್ದು, ಈ ಸೈಕಲ್ ಓಡಿಸಲು ಚಾಲನಾ ಪರವಾನಗಿ ಅಗತ್ಯವಿರುವುದಿಲ್ಲ.

ಕಳೆದ ವರ್ಷ ಡಿಸೆಂಬರ್ ನಲ್ಲಿ ನಟ ಸಲ್ಮಾನ್ ಖಾನ್ ಅಭಿಮಾನಿಗಳಿಗಾಗಿ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಈ ಅಪ್ಲಿಕೇಶನ್  ಮೂಲಕ ಅವರ ಫ್ಯಾನ್ಸ್ ಸಲ್ಮಾನ್ ಖಾನ್ ಜತೆಗೆ ಸಂಪರ್ಕದಲ್ಲಿರಬಹುದು. ಗೂಗಲ್ ಪ್ಲೇ ನಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

Edited By

venki swamy

Reported By

Sudha Ujja

Comments