ಲವ್ ಯೂ ರಚ್ಚು ಶೂಟಿಂಗ್ ದುರಂತ: ಓರ್ವ ಸಾವು- ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ
ಲವ್ ಯೂ ರಚ್ಚು ಸಿನಿಮಾ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸಹಾಯಕ ಫೈಟರ್ ವಿವೇಕ್ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿನಿಮಾ ನಿರ್ದೇಶಕ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಕುರಿತು ಕಿಡಿಕಾರಿರುವ ಅಜಯ್, ಚಿತ್ರೀಕರಣದ ವೇಳೆ ಹೈಟೆನ್ ಶನ್ ವಿದ್ಯುತ್ ತಂತಿಗೆ ಮೆಟಲ್ ರೋಪ್ ಬಳಸಿ ಶೂಟಿಂಗ್ ಮಾಡಲಾಗಿದೆ. ಹಾಗಾಗಿ ಶಾಕ್ ಹೊಡೆದು ದುರಂತ ಸಂಭವಿಸಿದೆ. ನಾನು 5 ದಿನಗಳ ಹಿಂದೆಯೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೆ. ನಾವು ಪ್ರಶ್ನೆ ಮಾಡಿದರೆ ಕೋಪಕ್ಕೆ ಗುರಿಯಾಗಬೇಕಾಗುತ್ತೆ, ಮೂಗು ತೂರಿಸುತ್ತಾರೆ ಅಂತಾರೆ. ಮುಂಜಾಗೃತಾ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ಘಟನೆ ಸಂಭವಿಸಿದೆ. ಅಮಾಯಕ ವ್ಯಕ್ತಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.
ತಮಿಳುನಾಡು ಮೂಲದ ವಿವೇಕ್ (28) ಸಾವನ್ನಪ್ಪಿದ್ದು, ರಾಮನಗರ ತಾಲೂಕಿನ ಜೋಳದ ಪಾಳ್ಯ ಬಳಿ ಈ ದುರಂತ ಸಂಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಟ್ ಮಾಸ್ಟರ್ ವಿನೋದ್ ಮತ್ತು ಚಿತ್ರದ ನಿರ್ದೇಶಕ ಆರ್. ಶಂಕರ್ ಅವ್ರನ್ನ ರಾಮನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Comments