10 ತಿಂಗಳ ಹೆಣ್ಣು ಮಗು ರೇಪ್ ಮಾಡಿ ಗೂಗಲ್ ಸರ್ಚ್ ಮಾಡಿದ ಪಾಪಿ ತಂದೆ!

09 Oct 2020 12:26 PM | Crime
303 Report

ಪಾಪಿ ತಂದೆಯೊಬ್ಬ ತನ್ನ 10 ತಿಂಗಳ ಹೆಣ್ಣು ಶಿಶುವಿನ ಮೇಲೆ ಅತ್ಯಾಚಾರವೆಸಗಿ ಬಳಿಕ ಗೂಗಲ್ ಸರ್ಚ್ ಮಾಡಿರುವ ಆಘಾತಕಾರಿ ಘಟನೆಯೊಂದು ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ನಡೆದಿದೆ.

ಕಾಮುಕ ತಂದೆಯೊಬ್ಬ ತನ್ನ 10 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಸಾವಿಗೆ ಕಾರಣನಾಗಿದ್ದಾನೆ. ಸಾವಿಗೂ ಮುನ್ನ ಮಗು ಉಸಿರಾಡುವುದನ್ನು ನಿಲ್ಲಿಸಿದರೆ ಏನು ಮಾಡಬೇಕು ಎಂಬುದನ್ನು ಗೂಗಲ್​ ಹುಡುಕಾಡಿದ್ದಾನೆ. ಮಗುವಿನ ತಲೆಯಲ್ಲಿ ಗಾಯಗಳಾಗಿದ್ದು ಗೊತ್ತಾಗಿದೆ. ಪಾಪಿ ತಂದೆ ಮುಂಚೆಯೇ ತುರ್ತು ಸೇವೆಗೆ ಕರೆಮಾಡುವ ಬದಲು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರು ಮಹಿಳೆಯರ ಜೊತೆ ಮಾತುಕತೆ ನಡೆಸಿದ್ದಾನೆ. ಆದ್ರೆ ಆ ಮಹಿಳೆಯರ ಬಳಿ ಮಗುವಿನ ವಿಷಯವನ್ನು ಹೇಳದೆ ಮುಚ್ಚಿಟ್ಟಿದ್ದ, ಡೈಲಿ ಮೇಲ್​ ವರದಿ ಪ್ರಕಾರ ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮಗುವಿನ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಮಗುವಿಗೆ ಅಪಾಯ ಉಂಟು ಮಾಡಿದ್ದು ಸೇರಿ ಇನ್ನಿತರ ಪ್ರಕರಣಗಳನ್ನು ಅಧಿಕಾರಿಗಳು ಮಂಗಳವಾರ ದಾಖಲಿಸಿದ್ದಾರೆ.

Edited By

venki swamy

Reported By

venki swamy

Comments