ಐಂದ್ರಿತಾ ರೇ-ದಿಗಂತ್ 'ದಂ'ಪತಿಗೆ ಸಿಸಿಬಿ ಯಿಂದ ನೋಟಿಸ್
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ದಿನ ಕಳೆದಂತೆ ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದ್ದು ಇದೀಗ ನಟಿ ಐಂದ್ರಿತಾ ರೈ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದ್ದು ಬುಧವಾರ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಲು ತಿಳಿಸಿದೆ.
ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ಬಂದ ನಂತರ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.
ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್ ಫಾಝಿಲ್ ಶಾಸಕ ಜಮೀರ್ ಅಹ್ಮದ್ರ ಆಪ್ತ, ಡ್ರಗ್ಸ್ ಕೇಸ್ನ ಪ್ರಮುಖ ಆರೋಪಿ ಕೂಡ. ಫಾಝಿಲ್ ಆಯೋಜಿಸುತ್ತಿದ್ದ ಕ್ಯಾಸಿನೋ ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ಚಿತ್ರನಟಿಯರಿಂದ ಮಾತನಾಡಿಸಿ ರಾಜಕಾರಣಿಗಳು ಮತ್ತು ಗಣ್ಯರ ಮಕ್ಕಳಿಗೆ ಆಹ್ವಾನ ನೀಡುತ್ತಿದ್ದ. ಇದೇ ರೀತಿ ಕನ್ನಡದ 'ಮನಸಾರೆ' ಬೆಡಗಿ ಐಂದ್ರಿತಾ ರೇ ಮೂಲಕವೂ 'ಕೊಲೊಂಬೋಗೆ ನೀವೂ ಬನ್ನಿ, ನಾನು ಬರ್ತೀನಿ' ಎಂದು ವಿಡಿಯೋ ಸಂದೇಶ ಮಾಡಿಸಿದ್ದ. ಈ ಬಗ್ಗೆ ಸೋಮವಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
Comments