8 ಪೊಲೀಸರನ್ನು ಹತ್ಯೆ ಮಾಡಿದ್ದ ಕುಖ್ಯಾತ ರೌಡಿಶೀಟರ್ವಿಕಾಸ್ ದುಬೆ ಬಂಧನ !

09 Jul 2020 12:33 PM | Crime
273 Report

ಉತ್ತರಪ್ರದೇಶದ 8 ಪೊಲೀಸರ ಹತ್ಯೆಗೆ ಕಾರಣನಾಗಿದ್ದ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆನನ್ನ ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಮುಖ ಆರೋಪಿ ವಿಕಾಸ್ ದುಬೆ  ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಇರುವ ಮಹಾಕಾಳ ದೇವಾಸ್ಥಾನಕ್ಕೆ  ಇಂದು ಮುಂಜಾನೆ ತೆರಳಿದ್ದಾನೆ. ಸದ್ಯ ದೇವಾಲಯ ಮುಂಗಡವಾಗಿ ಬುಕ್ಕಿಂಗ್‌ ಮಾಡಿದವರಿಗೆ ದರ್ಶನದ ವ್ಯವಸ್ಥೆ ಕಲ್ಪಿಸುತ್ತಿದೆ. ದುಬೆ ಕೂಡ ಬುಕ್ಕಿಂಗ್‌ ಮಾಡಿಕೊಂಡು ದೇವರ ದರ್ಶನ ಪಡೆದಿದ್ದಾನೆ ಎನ್ನಲಾಗಿದೆ. ನಂತರ ನಾನು ವಿಕಾಸ್‌ ದುಬೆ ಎಂದು ಜೋರಾಗಿ ಅರಚಿಕೊಂಡು ಹೇಳಿದ್ದಾನೆ. ಕೂಡಲೇ ದೇವಾಲಯದ ರಕ್ಷಣ ಸಿಬ್ಬಂದಿಗಳು ಆತನನ್ನ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತಕ್ಷಣ ಯುಪಿ ಪೊಲೀಸರಿಗೆ ಮಧ್ಯಪ್ರದೇಶ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಯುಪಿ ಪೊಲೀಸರು ದುಬೆಯನ್ನ ಕರೆದುಕೊಂಡು ಹೊಗಿದ್ದಾರೆ.

ನಿನ್ನೆ ಉತ್ತರಪ್ರದೇಶ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಮರ್​ ದುಬೆ ಹಾಗೂ ಮತ್ತೋರ್ವ ಸಹಚರನನ್ನ ಎನ್​ಕೌಂಟರ್ ಮಾಡಿದ್ದರು.

Edited By

venki swamy

Reported By

venki swamy

Comments