ಭಾರತ-ಚೀನಾ ನಡುವೆ ಸಂಘರ್ಷ: 3 ಭಾರತೀಯ ಯೋಧರು ಹುತಾತ್ಮ

16 Jun 2020 4:16 PM | Crime
338 Report

ಇಂಡೋ - ಚೀನಾ ಗಡಿ ಪ್ರದೇಶವಾದ ನಂತರ ಗಾಲ್ವಾನ್ ಕಣಿವೆ, ಲಡಾಖ್ ಮತ್ತು ಇತರ ಪ್ರದೇಶಗಳಲ್ಲಿನ ಸೋಮವಾರ ರಾತ್ರಿ ಉಭಯ ಸೈನಿಕರು ಕೈ ಕೈ ಮಿಲಾಯಿಸಿದ ಪರಿಣಾಮ ಮೂವರು ಭಾರತೀಯ ಸೈನಿಕರು ಸಾವನ್ನಪ್ಪಿದ್ದು, ಉಭಯ ದೇಶದ ಯೋಧರ ನಡುವಿನ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಪೂರ್ವ ಲಡಾಕ್ ನಲ್ಲಿ ಸೇನೆ ಜಮಾವಣೆ ಮಾಡಿ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾದ ಸೈನಿಕರು ನಿನ್ನೆ ರಾತ್ರಿ ಕರ್ನಲ್ ಸೇರಿದಂತೆ ಮೂವರು ಭಾರತೀಯ ಯೋಧರನ್ನು ಹತ್ಯೆಗೈದಿದ್ದಾರೆ. ಭಾರತ ಗಡಿಗೆ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದ್ದರು. ಇದರಿಂದಾಗಿ ಕಳೆದ ರಾತ್ರಿ ಭಾರತೀಯ ಯೋಧರು ಚೀನಾ ಸೈನಿಕರನ್ನು ನಿಯಂತ್ರಿಸಲು ಮುಂದಾಗಿದ್ದರು. ಈ ವೇಳೆ ನೂಕಾಟ, ತಳ್ಳಾಟ ನಡೆದಿತ್ತು, ನಂತರ ಗುಂಡಿನ ದಾಳಿ ನಡೆದಿದ್ದು, ಮೂವರು ಭಾರತೀಯರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಉಭಯ ದೇಶಗಳ ಉನ್ನತ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಗಡಿಯಲ್ಲಿ ಭಾರತ ಚೀನಾ ಸೈನಿಕರ ಸಂಘರ್ಷ ನಡೆಯುತ್ತದೆ. ಆದರೆ ಗುಂಡಿನ ದಾಳಿಗಳು ನಡೆದಿರಲಿಲ್ಲ. ಆದರೆ ಸೋಮವಾರ ರಾತ್ರಿ ಚೀನಿ ಸೈನಿಕರು ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ.

Edited By

venki swamy

Reported By

venki swamy

Comments