ಸಿಲಿಕಾನ್ ಸಿಟಿಯಲ್ಲಿ ಟೆಕ್ಕಿಯಿಂದ ತಂದೆ-ತಾಯಿ ಕೊಲೆಮಾಡಿರುವ ಶಂಕೆ
ವೃದ್ಧ ದಂಪತಿಗಳನಮ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಕೋಣನಕುಂಟೆ ಹತ್ತಿರದ ಆರ್ಬಿಐ ಲೇಔಟ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಿವೃತ್ತ ಸರ್ಕಾರಿ ಉದ್ಯೋಗಿ ಗೋವಿಂದಪ್ಪ (65) ಹಾಗೂ ಅವರ ಪತ್ನಿ ಶಾಂತಮ್ಮ (55) ಕೊಲೆಯಾದವರು. 'ಕೆಲ ವರ್ಷಗಳ ಹಿಂದಷ್ಟೇ ನಿವೃತ್ತರಾಗಿದ್ದ ಗೋವಿಂದಪ್ಪ, ಪತ್ನಿ ಹಾಗೂ ಮಗ ನವೀನ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಮಗನ ಜೊತೆ ಜೆ.ಪಿ.ನಗರದ ಆರ್‌ಬಿಐ ಲೇಔಟ್‌ನ ಮನೆಯಲ್ಲಿ ವಾಸವಿದ್ದರು.ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆ-ತಾಯಿಯನ್ನು ಕೊಲೆ ಮಾಡಿದ್ದು, ಕುಡಿದ ಮತ್ತಿನಲ್ಲಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
Comments