ಮನೆಯಲ್ಲಿ ಮಲಗಿದ್ದ ಮಗು ಚಿರತೆಗೆ ಬಲಿ
ಮನೆಯಲ್ಲಿ ಮಲಗಿದ್ದ 3 ವರ್ಷದ ಗಂಡು ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಜೋರು ಮಳೆಗೆ ವಿದ್ಯುತ್ ಕಡಿತಗೊಂಡಿತ್ತು. ಹೀಗಾಗಿ ಸೆಖೆ ಎಂದು ಮನೆಯವರು ಬಾಗಿಲು ತೆರೆದು ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಚಿರತೆ ಬಂದು ಮಗುವನ್ನು ಎಳೆದೊಯ್ದಿದೆ.
ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಮಗು ಮನೆಯಲ್ಲಿರಲಿಲ್ಲ. ಗಾಬರಿಗೊಂಡು ಹುಡುಕಾಡಿದಾಗ ಸುಮಾರು 60 ಮೀಟರ್ ದೂರದ ಪೊದೆಯೊಂದರಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ದೇಹವನ್ನು ಚಿರತೆ ಅರ್ಧಂಬರ್ಧ ತಿಂದು ಹಾಕಿ ನಾಪತ್ತೆಯಾಗಿತ್ತು. ರಾತ್ರಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆಯಲ್ಲಿ ಚಿರತೆ ಮನೆಗೆ ನುಗ್ಗಿ ಮಗುವನ್ನು ಎಳೆದೊಯ್ದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಘಟನೆಯ ವಿವರ ಪಡೆದಿದ್ದಾರೆ, ಅಲ್ಲಿ ಹಿಂದೆ ಇಂಥದ್ದೇ ಘಟನೆ ನಡೆದಿತ್ತಾ ಎನ್ನುವುದರ ಕುರಿತು ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ.
Comments