ಲಾರಿ ಚಾಲಕನ ವೇಷದಲ್ಲಿ ಕರ್ನಾಟಕ ಸಿಂಗಂ, ಲಂಚ ಪದೆದು ಸಿಕ್ಕಿಬಿದ್ದ ಆರ್​ಟಿಒ ಖದೀಮರು

03 Apr 2020 1:37 PM | Crime
373 Report

ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ರವಿ ಡಿ ಚನ್ನಣ್ಣನವರ್ ಈಗ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್​ಪಿಯಾಗಿರುವ ರವಿ ಚೆನ್ನಣ್ಣನವರ್ ಅವರು ಲಾರಿ ಚಾಲಕನ ಮಾರುವೇಷದಲ್ಲಿ ಹೋಗಿ ಭ್ರಷ್ಟ ಆರ್​ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅತ್ತಿಬೆಲೆಯಲ್ಲಿರುವ ಕರ್ನಾಟಕ-ತಮಿಳುನಾಡು ಗಡಿಭಾಗ ಚೆಕ್​ಪೋಸ್ಟ್​ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ಟಿ.ಕೆ. ಜಯಣ್ಣ ಹಾಗೂ ಕರಿಯಪ್ಪ ಅಮಾನತುಗೊಂಡ ಸಾರಿಗೆ ಅಧಿಕಾರಿಗಳು. ಇವರೊಂದಿಗೆ ಶಾಮೀಲಾಗಿದ್ದ ಮಾಜಿ ಹೋಮ್ ಗಾರ್ಡ್ ವಿವೇಕ್ ರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕರಿಯಪ್ಪ ಅವರಿಂದ 1250 ರೂ., ಜಯಣ್ಣ ಅವರಿಂದ 1100 ರೂ. ಹಾಗೂ ವಿವೇಕ್ ಅವರಿಂದ 800 ರೂ. ಹಾಗೂ ಚೆಕ್ ಪೋಸ್ಟ್ ಕಚೇರಿಯಲ್ಲಿ 12350 ರೂ. ವಶಪಡಿಸಿಕೊಳ್ಳಲಾಗಿದೆ. ಟೆಂಪ್ರವರಿ ಪರ್ಮಿಟ್ ಕೊಡುವ ಹೆಸರಲ್ಲಿ ಒಂದೊಂದು ವಾಹನದಿಂದ 400-500 ರೂಪಾಯಿ ಹಣ ಪಡೆಯಲಾಗುತ್ತಿತ್ತು. ಈ ವೇಳೆ, ಲಾರಿ ಚಾಲಕನಾಗಿ ಮಾರುವೇಷದಲ್ಲಿದ್ದ ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ ಚನ್ನಣ್ಣನವರ್ ಅವರು ಆರೋಪಿಗಳನ್ನು ಹಿಡಿದು ಬಂಧಿಸಿದ್ದಾರೆ.

Edited By

venki swamy

Reported By

venki swamy

Comments