ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲಿ ತಾಳಿ ಕಟ್ಟಿದವ ಅಂದರ್ !!

05 Feb 2020 12:29 PM | Crime
471 Report

ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ರಾಮನಗರದಲ್ಲಿ ಬಂಧಿಸಿದ್ದಾರೆ.

ಇಲ್ಲೊಬ್ಬ ಯಶ್ ಅಭಿನಯದ ಕಿರಾತಕ ಚಿತ್ರ ನೋಡಿ ಪ್ರೇರೇಪಿತನಾದನೋ ಏನೋ ಗೊತ್ತಿಲ್ಲ. ಆದರೂ ಚಿತ್ರದ ಮಾದರಿಯಲ್ಲೇ ಮನು ಎಂಬವನು ಬಸ್ಸಿಗಾಗಿ ಕಾಯುತ್ತಿದ್ದ ತನ್ನ ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ್ದನು. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮನು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದವನಾಗಿದ್ದು, ತನ್ನ ಅತ್ತೆ ಮಗಳನ್ನು ಇಷ್ಟಪಡುತ್ತಿದ್ದನು. ಆದರೆ ಯುವತಿ ಮನುವನ್ನು ಮದುವೆಯಾಗಲು ನಿರಾಕರಿಸಿದ್ದಳು. ವಿರೋಧವಿದ್ದರೂ ಯುವಕ ಬಲವಂತವಾಗಿ ಕಿಡ್ನಾಪ್ ಮಾಡಿ ತಾಳಿ ಕಟ್ಟಿದ್ದಾನು. ಯುವತಿಯ ಪೋಷಕರು ನೀಡಿದ ದೂರಿನ ಮೆರೆಗೆ ಪೊಲೀಸರು ಗಂಭೀರವಾಗಿ ತನಿಖೆ ನೆಡಸಲು ಶುರು ಮಾಡಿದ್ದರು. ಇದೀಗ ಪೊಲೀಸರು ರಾಮನಗರದಲ್ಲಿ ಯುವತಿಯನ್ನು ರಕ್ಷಿಸಿ ಯುವಕನನ್ನು ಬಂಧಿಸಿದ್ದಾರೆ.

Edited By

venki swamy

Reported By

venki swamy

Comments