ಹುಡುಗಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಮಾಡಿದ್ದೇನು ಗೊತ್ತಾ?

05 Sep 2019 1:32 PM | Crime
539 Report

ಪ್ರೀತಿ ಪ್ರೇಮ  ಎಂಬ ವಿಚಾರಕ್ಕೆ ಬಂದರೆ ಹುಡುಗರು ಏನು ಬೇಕಾದರೂ ಕೂಡ ಮಾಡುತ್ತಾರೆ ಎಂಬುದಕ್ಕೆ ಇಲ್ಲೋಂದು ನಿದರ್ಶನವಿದೆ ನೋಡಿ.. ಹುಡುಗಿ ಪ್ರೀತಿ ನಿರಾಕರಿಸಿದಳು ಅಂತಾ ಹುಡುಗಿಯನ್ನು ಸಾಯಿಸದನ್ನು ನೋಡಿದ್ದೇವೆ, ಅಥವಾ ಹುಡುಗ ನೇ ಸತ್ತಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಫೋನ್ ನಂಬರ್ ನ್ನು ಪೋರ್ನ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿರುವ ಘಟನೆ ನಡೆದಿದೆ.

ಇಂದಿರಾ ನಗರ ನಿವಾಸಿಯಾಗಿರುವ ಮಹಮ್ಮದ್ ಮುದಾಸಿರ್ ಎಂಬಾತ ಯುವತಿಯೊಬ್ಬಳು ತನ್ನನ್ನು ಪ್ರೀತಿಸಲು ನಿರಾಕರಿಸಿದಕ್ಕೆ ಕೋಪಗೊಂಡು ಆಕೆಯ ಮೊಬೈಲ್ ನಂಬರನ್ನು ಪೋರ್ನ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ ಸೆಕ್ಸ್ ಗಾಗಿ ಈ ನಂಬರ್ ಗೆ ಸಂಪರ್ಕಿಸಿ ಎಂದು ಪೋಸ್ಟ್ ಹಾಕಿ ಬಿಟ್ಟಿದ್ದಾನೆ. ನಂತರ ಇದರ ಪರಿಣಾಮ ಯುವತಿಗೆ ಅಶ್ಲೀಲ ಕರೆ, ಮೆಸೇಜ್ ಬಂದಿದ್ದರಿಂದ ಪೋರ್ನ್ ವೆಬ್ ಸೈಟ್ ಗೆ ತನ್ನ ಮೊಬೈಲ್ ಸಂಖ್ಯೆ ಅಪ್ಲೋಡ್ ಆಗಿರುವುದು ಗೊತ್ತಾಗಿದೆ. ತಕ್ಷಣ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವ್ರೆ ಪ್ರೀತಿ ನಿರಾಕರಿಸಿದಕ್ಕೆ ಈ ರೀತಿನೂ ಸೇಡು ತೀರಿಸಿಕೊಂಡಿದ್ದಾನೆ ಆ ಯುವಕ..

Edited By

Manjula M

Reported By

Manjula M

Comments