ಸ್ಯಾಂಡಲ್ವುಡ್ ಸ್ಟಾರ್ ದಾಂಪತ್ಯದಲ್ಲಿ ಮತ್ತೆ ಬಿರುಕು..!?

12 Aug 2019 10:11 AM | Crime
900 Report

ಸದ್ಯ ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಆಗಿಂದಾಗೆ ಬಿರುಕುಗಳು  ಕಾಣಿಸಿಕೊಳ್ಳುತ್ತಿರುತ್ತವೆ.. ಕೆಲ ವರ್ಷಗಳ ಹಿಂದೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಬದುಕಿನಲ್ಲಿಯೂ ಕೂಡ ಬಿರುಗಾಳಿ ಹಬ್ಬಿತ್ತು.. ಚಂದನವನದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು… ಇದೀಗ ಮತ್ತೆ ಇಬ್ಬರ  ನಡುವೆ ಮನಸ್ತಾಪ ಉಂಟಾಗಿರಬಹುದು ಎಂಬ ಮಾತುಗಳು ಹರಿದಾಡುತ್ತಿವೆ.. ಈ ಅನುಮಾನ ಹುಟ್ಟುವುದಕ್ಕೆ ಕಾರಣ ವಿಜಯಲಕ್ಷ್ಮಿಯವರ ಟ್ವಿಟ್ಟರ್..

ಎಸ್.. ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ವಿಜಯಲಕ್ಷ್ಮೀ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದು ಸ್ವಲ್ಪ ಗೊಂದಲ ಸೃಷ್ಟಿ ಮಾಡಿಕೊಂಡಿದಲ್ಲದೆ, ಹಲವಾರು ಪ್ರಶ್ನೆಯನ್ನೂ ಕೂಡ ಹುಟ್ಟುಹಾಕಿದೆ. ಟ್ವಿಟರ್​ ಖಾತೆಯಲ್ಲಿ ವಿಜಯಲಕ್ಷ್ಮೀ ದರ್ಶನ್​ ಎಂದಿದ್ದ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.. ಈಗ ಅವರ ಟ್ವಿಟರ್​ನಲ್ಲಿ ಬರೀ ವಿಜಯಲಕ್ಷ್ಮೀ ಎಂದಷ್ಟೇ ಹೆಸರಿದ್ದು ದರ್ಶನ್ ಅವರ ಹೆಸರನ್ನು ತೆಗೆದುಹಾಕಿದ್ದಾರೆ..  ಅವರು ದರ್ಶನ್​ರವಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸಿದ್ದು ಈ ಕಾರಣಕ್ಕಾಗಿ ಅವರು ತಮ್ಮ ಹೆಸರನ್ನು ಟ್ವಿಟರ್‌ನಲ್ಲಿ ದರ್ಶನ್​ ಅಂತ ತೆಗೆದುಹಾಕಿ, ಬರೀ ವಿಜಯ ಲಕ್ಷ್ಮಿ ಅಂತ ಉಳಿಸಿಕೊಂಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯಲಕ್ಷ್ಮಿ ಈ ರೂಮರ್​ಗಳೆಲ್ಲ ಆಧಾರವಿಲ್ಲದೆ ಹಬ್ಬಿಕೊಂಡಿದ್ದು. ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಏನು ತೊಂದರೆ ಇಲ್ಲ ಎಂದ ಮೇಲೆ ಹೆಸರನ್ನು ಬದಲಾಯಿಸಿಕೊಂಡಿರುವುದೇಕೆ ಎಂಬ ಪ್ರಶ್ನೆ ಮೂಡಿದೆ.

Edited By

Manjula M

Reported By

Manjula M

Comments