ಪೊಲೀಸ್ ಠಾಣೆಯ ಎದುರೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ..!!
ಆರಕ್ಷಕ ಠಾಣೆ ಎಂದರೆ ನೊಂದವರಿಗೆ ನ್ಯಾಯ ಕೊಡಿಸುವ ಸ್ಥಳ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವ ಸ್ಥಳ, ಆದರೆ ಇಲ್ಲೊಬ್ಬ ಯುವಕ ಪೊಲೀಸ್ ಠಾಣೆಯಲ್ಲಿ ಏನ್ ಮಾಡಿದ್ದಾನೆ ಗೊತ್ತಾ..? ಕೇಳುದ್ರೆ ಶಾಕ್ ಆಗಬಹುದು.. ಯುವಕನೊಬ್ಬ ಪೊಲೀಸ್ ಠಾಣೆಯ ಎದುರಲ್ಲೇ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿರುವ ಘಟನೆ ನಡೆದಿದೆ.
ಅಥಣಿ ಪೊಲೀಸ್ ಠಾಣೆ ಎದುರು ಚಾಕುವಿನಿಂದ ಕತ್ತು ಕೂಯ್ದುಕೊಂಡು ಆತ್ಮಹತ್ಯೆ ಯತ್ನವನ್ನ ಯುವಕನೊಬ್ಬ ನಡೆಸಿದ್ದಾನೆ. ಶಂಕರ್ ಮಾರುತಿ ಕಾಂಬಳೆ (25) ಆತ್ಮಹತ್ಯೆ ಯತ್ನಿಸಿದ ಯುವಕನಾಗಿದ್ದಾನೆ. ಯಾವ ವಿಚಾರಕ್ಕಾಗಿ ಆತ್ಮಹತ್ಯೆ ಯತ್ನ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ… ಪೊಲೀಸರು ಆತನನ್ನು ಅಥಣಿ ಸರ್ಕಾರಿ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಾಡುಹಗಲೇ ಠಾಣೆಯ ಎದುರು ಆತ್ಮಹತ್ಯೆಗೆ ಪ್ರಯತ್ನ ಮಾಡಿಕೊಂಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಆತ ಹುಷಾರಾದಾಗ ಅಸಲಿ ಕಾರಣ ತಿಳಿಯುತ್ತದೆ.
Comments