ರೌಡಿ ಶೀಟರ್ ಸುನೀಲ್ ಹತ್ಯೆಯಲ್ಲಿ ಸ್ಯಾಂಡಲ್ ವುಡ್ ನಟಿಯ ಕೈವಾಡ..!!

29 Apr 2019 10:11 AM | Crime
218 Report

ರೌಡಿ ಶೀಟರ್ ಸುನೀಲ್ ಹತ್ಯೆಗೆ ಸಂಬಂಧ ಪಟ್ಟಂತೆ ದಿನಕ್ಕೊಂದು ರೋಚಕ ತಿರುವು ಸಿಗುತ್ತಿದೆ.. ಇದೀಗ ರೌಡಿ ಶೀಟರ್ ಸುನೀಲ್ ಹತ್ಯೆಗೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ.. ರೌಡಿ ಶೀಟರ್ ಸುನೀಲ್ ಹತ್ಯೆಯಲ್ಲಿ ಸ್ಯಾಂಡಲ್ವುಡ್ ನಟಿಯ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ… ರೌಡಿ ಶೀಟರ್ ಸುನೀಲ್ ಹತ್ಯೆ ಪ್ರಕರಣದ ವಿಚಾರವಾಗಿ ರಾಮನಗರ ಪೊಲೀಸರು ಸ್ಯಾಂಡಲ್’ವುಡ್ ನಟಿಯನ್ನು ಬಂಧಿಸಿದ್ದಾರೆ

ಕೆಲವು ದಿನಗಳ ಹಿಂದೆ ಬಸವೇಶ್ವರ ನಗರದ ಮನೆಗೆ ನುಗ್ಗಿದ್ದ ರೌಡಿಗಳ ಗುಂಪು  ಹೊರಗೆಳೆದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಸುನೀಲ್ ಅನ್ನು ಕೊಂದಿದ್ದರು.ಈ ಹಿಂದೆ ರೌಡಿ ಸುನೀಲನ ಗ್ಯಾಂಗ್ ಸ್ಪಾಟ್ ನಾಗನ ಮೇಲೆ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಹೆಂಡತಿ ಮಕ್ಕಳು ನಾಗನನ್ನ ಬಿಟ್ಟಿದ್ದರು.. ಇದೇ ಪ್ರಕರಣದಲ್ಲಿ ಜೈಲಿಗೆ ಹೋಗಿ 10 ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ ಸುನೀಲ ಈಗಲೂ ನಾಗನನ್ನ ಕುಂಟನೆಂದು ರೇಗಿಸುತ್ತಿದ್ದರಿಂದ ಬೇಸತ್ತಿದ್ದ ನಾಗ ಸುನೀಲನ ಮನೆಗೇ ನುಗ್ಗಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿತ್ತು… ಆದರೆ ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ ನಟಿ ಪ್ರಿಯಾಂಕ ಮತ್ತು ಆಕೆಯ ತಾಯಿ ನಾಗಮ್ಮ ರನ್ನು ಪೊಲೀಸರು ಬಂಧಿಸಿದ್ದಾರೆ. ಯತ್ನ ಮತ್ತು ಐಪಿಸಿ ಸೆಕ್ಷನ್​​-300 ಹೆಸರಿನ ಸಿನಿಮಾಗಳಲ್ಲಿ ಪ್ರಿಯಾಂಕ ಅಲಿಯಾಸ್ ಸವಿತಾ ಅಭಿನಯಿಸಿದ್ದರು.. ಆದರೆ ಕೊಲೆಗೆ ಕಾರಣ ಸ್ಪಷ್ಟವಾಗಿ ತಿಳಿದುಬಂದಿಲ್ಲ.,. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ..

Edited By

Manjula M

Reported By

Manjula M

Comments