ಆನಂದ್ ಸಿಂಗ್ ಹಲ್ಲೆ ಪ್ರಕರಣದ ಆರೋಪಿ ಕಂಪ್ಲಿ ಶಾಸಕ ಗಣೇಶ್ 'ಬಂಧನ'..!!

20 Feb 2019 3:43 PM | Crime
189 Report

ರಾಮನಗರ ಜಿಲ್ಲೆಯ ಈಗಲ್ಟನ್ ರೆಸಾರ್ಟ್​ನಲ್ಲಿದ್ದ ಶಾಸಕರ ಮಧ್ಯೆ ಹೊಡೆದಾಟ ಪ್ರಕರಣದ‌ ಪ್ರಮುಖ ಆರೋಪಿಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್​ ನನ್ನು ಇಂದು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಈಗಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯದ ವೇಳೆ ಕುಡಿದ ಮತ್ತಿನಲ್ಲಿ ಕಾಂಗ್ರೆಸ್‌ ಶಾಸಕ ಆನಂದ್ ಸಿಂಗ್‌ ಮೇಲೆ ಹಲ್ಲೆ ನಡೆಸಿ, ಕಾಂಗ್ರೆಸ್‌ ಶಾಸಕ ಜೆ.ಎನ್‌. ಗಣೇಶ್‌ ತಲೆ ಮರೆಸಿಕೊಂಡಿದ್ದರು. ರಾಜಕೀಯ ವಲಯದಲ್ಲಿ ಸಾಕಷ್ಟು ಕಿತ್ತಾಟಗಳು ಒಳಜಗಳಗಳು ನಡೆಯುತ್ತಿದ್ದವು.. ಆದರೆ ಇದೀಗ ಆ ಜಗಳಗಳು ಹೊಡೆದಾಟಗಳು ಎಲ್ಲವೂ ಕೂಡ ಬಹಿರಂಗವಾಗಿಯೇ ನಡೆಯುತ್ತಿವೆ…

ಆಪರೇಷನ್‌ ಕಮಲದ ಆತಂಕದ ಹಿನ್ನೆಲೆಯಲ್ಲಿ ರೆಸಾರ್ಟ್‌ ಸೇರಿದ್ದ ಕಾಂಗ್ರೆಸ್‌ ಶಾಸಕರು ಗಲಾಟೆ ಮಾಡಿಕೊಂಡ ಹಿನ್ನೆಲೆಯಲ್ಲಿಯೇ ಕಂಪ್ಲಿ ಶಾಸಕ ಜೆ.ಎನ್‌ ಗಣೇಶ್‌ ಅವರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ವಿಜಯನಗರ ಶಾಸಕ ಆನಂದ್‌ ಸಿಂಗ್‌ ಅವರಿಗೆ ಕಣ್ಣಿಗೆ ಆಗಿರುವ ಗಾಯವಾಗಿದ್ದು ಕಣ್ಣು ಊದಿಕೊಂಡಿತ್ತು, ಇದರ ಬೆನ್ನಲ್ಲೇ ಕಂಪ್ಲಿ ಶಾಸಕ ಗಣೇಶ್‌ ಐಪಿಸಿ ಸೆಕ್ಸನ್‌ 323, 324, 307 ,504, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ಆ ಸಮಯದಲ್ಲಿ ಶಾಸಕ ಗಣೇಶ್‌ ಅವರ ಅಮಾನತು ಆದೇಶವನ್ನು ಕೂಡ ಹೊರಡಿಸಿದ್ದಾರೆ. ಇದೀಗ ಗಣೇಶ್ ಅವರನ್ನು ಬಂಧಿಸಲಾಗಿದೆ.

Edited By

Manjula M

Reported By

Manjula M

Comments