ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಅನಿತಾ ಕುಮಾರಸ್ವಾಮಿ..!! ಕಾರಣ ಏನ್ ಗೊತ್ತಾ..?

08 Feb 2019 8:50 AM | Crime
5193 Report

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಧರ್ಮಪತ್ನಿಯಾದ ಅನಿತಾ ಕುಮಾರಸ್ವಾಮಿಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಸಲುವಾಗಿ ತಾಯಿ ಅನಿತಾ ಕುಮಾರಸ್ವಾಮಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸ್ಯಾಂಡಲ್ ವುಡ್ ಬಹುನಿರೀಕ್ಷಿತ ಸಿನಿಮಾವಾದ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಈ ಸಿನಿಮಾದ ವಿಷಯಕ್ಕಾಗಿಯೇ ಅನಿತಾ ಕುಮಾರಸ್ವಾಮಿ ಪೊಲೀಸ್ ಮೆಟ್ಟಿಲೇರಿದ್ದಾರೆ..

ತಮ್ಮ ಒಡೆತನದ ಚೆನ್ನಾಂಬಿಕ ಬ್ಯಾನರ್ಸ್‌ ಅಡಿಯಲ್ಲಿ ರೀಲಿಸ್ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮಕಲ್ಯಾಣ ಚಿತ್ರವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಿ ಅನಿತಾ ಕುಮಾರಸ್ವಾಮಿ ಅವರು  ಇದೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧವಾಗಿ ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಫೆಬ್ರವರಿ 5 ರಂದು ಶಶಿಧರ್ ಟಿ.ಎಸ್. ಎಂಬುವರ ವಿರುದ್ಧ ದೂರು ನೀಡಿದ್ದು, ಪೊಲೀಸರು ಹಕ್ಕುಸಾಮ್ಯ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ನಲ್ಲಿ ಸೆರೆ ಹಿಡಿದು ಈ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.. ಒಟ್ಟಾರೆಯಾಗಿ ಕನ್ನಡ ಸಿನಿಮಾಗಳಿಗೆ ಈ ರೀತಿಯ ಗತಿಯಾದರೆ ಹೇಗೆ ಎಂಬ ಕನ್ನಡ ಚಿತ್ರೋದ್ಯಮದ ಮಾತಾಗಿದೆ.

Edited By

Manjula M

Reported By

Manjula M

Comments