ಆನ್’ಲೈನ್ ನಲ್ಲಿ ಶಾಪಿಂಗ್ ಮಾಡುವ ಮೊದಲು ಎಚ್ಚರ..!!! ಬುಕ್ ಮಾಡಿದ್ದು ಸ್ಯಾಮ್‍ಸಂಗ್ ನೋಟ್ 9…ಬಂದಿದ್ದು…..?

29 Jan 2019 5:34 PM | Crime
195 Report

ಕೈಯಲ್ಲಿ ಒಂದು ಆಂಡ್ರಾಯ್ಡ್ ಮೊಬೈಲ್ ಇದ್ದರೆ ಸಾಕು… ಇಡೀ ಜಗತ್ತೆ ನಮ್ಮ ಕೈಯಲ್ಲಿ ಅನಿಸಿಬಿಡುತ್ತದೆ.. ಇತ್ತಿಚಿಗೆ ಆನ್ ಲೈನ್ ಶಾಪಿಂಗ್ ಹೆಚ್ಚಾಗಿದೆ.. ಹೊರಗಡೆ ಹೋಗಿ ಯಾರ್ ಸುತ್ತಾಡುರೋ ಅನ್ಕೊಂಡು ಮನೆಲೀ ಕೂತುಕೊಂಡೆ ಎಲ್ಲಾ ಬುಕ್ ಮಾಡಿಬಿಡುತ್ತಾರೆ.. ಆದರೆ ಎಷ್ಟೊ ಸಲ ನಾವ್ ಬುಕ್ ಮಾಡಿದ್ದೆ ಒಂದು… ಬರೋದೆ ಮತ್ತೊಂದು.. ಈ ರೀತಿಯ ಎಷ್ಟೋ ಪ್ರಕರಣಗಳು ನಡೆದಿವೆ… ಆದರೂ ಜನ ಯಾಕೋ ಬುದ್ದಿ ಕಲಿತ ಆಗೆ ಕಾಣುತ್ತಿಲ್ಲ… ೀ ರೀತಿಯ ಮತ್ತೊಂದು ಘಟನೆ ನಡೆದಿದೆ.. ಮೊಬೈಲ್ ಬದಲು ಸರ್ಫ್ ಎಕ್ಸೆಲ್ ಸೋಪ್ ಕೊಟ್ಟು ಆನ್‍ಲೈನ್ ಕಂಪನಿಯೊಂದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವೆಂಕಟೇಶ್ ಎಂಬುವರು ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡಿದ್ದರು. ವೆಂಕಟೇಶ್ ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ಆಗಿದ್ದು, ಪೇಟಿಯಂ ನಲ್ಲಿ ವೆಂಕಟೇಶ್ 85 ಸಾವಿರ ಹಣ ಪಾವತಿಸಿ ಸ್ಯಾಮ್‍ಸಂಗ್ ನೋಟ್ 9 ಮೊಬೈಲ್ ಖರೀದಿ ಮಾಡಿದ್ದರು. ಇದೇ ವೇಳೆ ಡೆಲಿವರಿ ಬಾಯ್ ಗ್ರಾಹಕನ ಸಹಿ ಪಡೆಯದೇ ಮೊಬೈಲ್ ನೀಡಿದ್ದ. ವೆಂಕಟೇಶ್ ಡೆಲಿವರಿ ಬಾಯ್ ಕೊಟ್ಟ ಬಾಕ್ಸ್ ಓಪನ್ ಮಾಡಿ ನೋಡಿದ್ದಾಗ ಅದರಲ್ಲಿ 5 ರೂ. ಸರ್ಫ್ ಎಕ್ಸೆಲ್ ಸೋಪು ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ರೀತಿಯ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.. ಆದರೆ ಮೋಸ ಹೋಗುವವರು ಹೋಗುತ್ತಲೆ ಇರುತ್ತಾರೆ…

Edited By

Manjula M

Reported By

Manjula M

Comments