ಏರ್ ಪೋರ್ಟ್ ನಲ್ಲಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಟಿ : ಅವಳು ಮಾಡಿದ್ದೇನು...?

18 Jan 2019 1:01 PM | Crime
218 Report

ಏರ್ ಪೋರ್ಟ್ ನಲ್ಲಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ನಟಿ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಮಾಡೆಲ್ ಳನ್ನು  ಸೀಮಾ ಸುಂಕದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಮಿಳುನಾಡಿನ ನಟಿ, 24 ವರ್ಷದ ಕಿರುತೆರೆ ಕಲಾವಿದೆ ಅರೆಸ್ಟ್ ಆಗಿರುವ ಆರೋಪಿ. ಈಕೆ ಮಾಡೆಲ್ ಕೂಡ ಆಗಿದ್ದಾರೆ.  

ಜನವರಿ 16 ರಂದು ದುಬೈನಿಂದ ಎತಿಹಾದ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ನಟಿಯನ್ನು ಅನುಮಾನದಿಂದ ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಟಿ ಕಳ್ಳತನವಾಗಿ ಚಿನ್ನವನ್ನು ಸಾಗಿಸುತ್ತಿದ್ದುದ್ದು ಕಂಡು ಬಂದಿದೆ. ಈಕೆ ತನ್ನ ಸೊಂಟದಲ್ಲಿ ಕಟ್ಟಿಕೊಂಡಿದ್ದ ಬೆಲ್ಟ್ ನಲ್ಲಿ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ತಕ್ಷಣವೇ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಮಾಡೆಲ್ ಬಳಿಯಿಂದ 15 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಬೆಂಗಳೂರಿನಿಂದ ಈಕೆ ಚಿನ್ನವನ್ನು ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ. ಅಂದಹಾಗೇ ಸಿನಿಮಾ ಕಲಾವಿದೆಯರನ್ನು ಈ ಕಳ್ಳ ಸಾಗಾಣಿಕೆಗೆ ಬಳಸಿಕೊಳ್ಳುತ್ತಾರೆ. ವಿದೇಶ ಪ್ರವಾಸದ ಆಮೀಷವೊಡ್ಡಿ ಈ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ಹಿಂದೆಯೂ ಕೂಡ ಅನೇಕ ಬಾರಿ ಕೆಲ ನಟಿಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು.   

Edited By

Manjula M

Reported By

Manjula M

Comments