ಜನರೇ ಎಚ್ಚರ: ಸದ್ದಿಲ್ಲದೇ ನಡೆಯುತ್ತಿದೆ ಕಿಡ್ನಿ ಮಾರಾಟ ದಂಧೆ..!

10 Jan 2019 5:38 PM | Crime
298 Report

ಇತ್ತಿಚಿಗೆ ಆಸ್ಪತ್ರೆ ಹೋಗೋದು ಅಂದರೆ ಸಾಕು ಕೆಲವರು ಭಯ ಬೀಳ್ತಾರೆ. ಹೊಟ್ಟೆ ನೋವು ಅಂತಾ ಹೋದವರು ಶವವಾಗಿ ಹೊರಗಡೆ ಬರೋ ಪರಿಸ್ಥಿತಿ ಬಂದಿದೆ.ಒಂದು ವೇಳೆ ಯಾಮಾರಿದ್ದರೆ ನಮ್ಮ ದೇಹದ ಭಾಗಗಳು ಮಿಸ್ ಆಗೋದು ಗ್ಯಾರೆಂಟಿ. ಇದೇ ರೀತಿಯ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲೂ ನಡೆದಿದೆ. ಇದೀಗ ಪಟ್ಟಣದಲ್ಲಿ ಕಿಡ್ನಿ ಮಾರಾಟ ದಂಧೆಯೊಂದು ಸದ್ದಿಲ್ಲದೆ ನಡೆಯುತ್ತಿದೆ, ತುಂಬಾ ದಿನಗಳಿಂದಲೂ ನಿರಂತರವಾಗಿ ನಡೆಯುತ್ತಿರುವ ಆಘಾತಕಾರಿ ಸಂಗತಿಯೊಂದು ಇದೀಗ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಈ ರೀತಿಯ  ದಂಧೆಗೆ ಬಲಿಯಾಗುವುದರಿಂದ ಈ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.. ಪಟ್ಟಣದ ಗಂಗಾಮತ ಬೀದಿಯ ವಾಸಿ ಮಲ್ಲಯ್ಯ ಎಂಬುವರ ಪತ್ನಿ ವೆಂಕಟಮ್ಮ (53) ಪಟ್ಟಣದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ  ಪಟ್ಟಣದಲ್ಲಿ ಈ ಕರಾಳ ಕಿಡ್ನಿದಂಧೆ ನಡೆಯುತ್ತಿರುವುದು ಬಯಲಿಗೆ ಬಂದಿದೆ

ಹೂವು ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದತಂಹ ವೆಂಕಟಮ್ಮ ಅವರಿಗೆ ಕಿತ್ತು ತಿನ್ನುವ ಬಡತನ, ವ್ಯಾಪಾರ ನಂಬಿ ಮಾಡಿಕೊಂಡಿರುವ ಸಾಲದ ಭಾದೆ, ಮನೆಯಲ್ಲಿ ತೀವ್ರವಾದ ಆರ್ಥಿಕ ಮುಗ್ಗಟ್ಟಿನಿಂದ ತೊಂದರೆಯಲ್ಲಿದ್ದರು.. ಇವರು ತೀರ ಪರಿಚಿತಳಾದ ಮಹಿಳೆ ನೀನು ನಿನ್ನ ಕಿಡ್ನಿಯನ್ನು ಮಾರಾಟ ಮಾಡಲು ಒಪ್ಪಿಕೊಂಡರೆ ನಿನಗೆ 30 ಲಕ್ಷ ರೂ. ಕೊಡಿಸುವುದಾಗಿ, ಇದರಿಂದ ನಿನ್ನ ಕಷ್ಟಗಳೆಲ್ಲಾ ನಿವಾರಣೆಯಾಗಿ ಅದ್ಧೂರಿ ಜೀವನ ನಡೆಸಬಹುದು ಎಂದು ಆಕೆಯನ್ನು ನಂಬಿಸಿದ್ದರು..ಇದಕ್ಕೆ ಒಪ್ಪಿದ ವೆಂಕಟಮ್ಮ ಆದಷ್ಟು ಬೇಗ ನನ್ನ ಕಿಡ್ನಿಯನ್ನು ಮಾರಾಟ ಮಾಡಿಸಿಕೊಡುವಂತೆ ಆಕೆಯನ್ನು ಕೇಳಿದ್ದಾಳೆ.. ಇದಕ್ಕೆ ಒಪ್ಪಿದ ಆಕೆ ಅದಕ್ಕೂ ಮೊದಲೇ ನನಗೆ ಬರಬೇಕಾದ 3 ಲಕ್ಷ ರೂ. ಕಮಿಷನ್ ಹಣ ನನ್ನ ಕೈಗೆ ಕೊಟ್ಟರೆ ತಕ್ಷಣ ಕಿಡ್ನಿ ಮಾರಾಟ ಮಾಡಿವುದಾಗಿ ತಿಳಿಸಿದ್ದಳು. ಈಕೆಯ ಮಾತಿಗೆ ಒಪ್ಪಿಕೊಂಡ ವೆಂಕಟಮ್ಮ ಮೊದಲೇ  2 ಲಕ್ಷ ರೂ. ಹಣವನ್ನು ಅವರಿವರ ಬಳಿ ಬಡ್ಡಿಗೆ ಸಾಲ ಪಡೆದು ನೀಡಿದ್ದಳೆಂದು ಕುಟುಂಬದವರು ತಿಳಿಸಿದ್ದಾರೆ.ಹಣ ನೀಡಿ ಎಷ್ಟೇ ದಿನಗಳಾದರೂ ಕಿಡ್ನಿ ಮಾರಾಟ ಮಾಡಿಸಿಕೊಡದ ವಂಚಕಿ ಇಲ್ಲದ ಸಬೂಬು ಹೇಳುತ್ತ ಕಾಲ ಕಳೆದಿದ್ದಾಳೆ..  ಇತ್ತ ಸಾಲಗಾರರ ಇನ್ನಷ್ಟು ಒತ್ತಡಗಳಿಂದ ಬೇಸತ್ತ ವೆಂಕಟಮ್ಮ ಮಹಿಳೆಯನ್ನು ಭೇಟಿ ಮಾಡಿ ತನಗೆ ಸಾಲಗಾರರ ಹಿಂಸೆ ಹೆಚ್ಚಾಗಿದ್ದು ನನ್ನ ಹಣವನ್ನು ವಾಪಸ್ಸು ಕೊಡು ಎಂದು ಕೇಳಿದ್ದಾರೆ.ಹೀಗಾಗಿ ಇತ್ತ ಸಾಲ ತೀರಿಸಲು ಆಗದೆ, ಸಾಲಗಾರರ ಕಾಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿ ಹೈಟೆಕ್ ಆಸ್ಪತ್ರೆಗಳಲ್ಲಿ ಕಿಡ್ನಿ ಮಾರಾಟ ದಂಧೆ ನಡೆಯುತ್ತಿರುವುದನ್ನು ಕೇಳಿದ್ದೇವೆ, ಆದರೆ ಮಳವಳ್ಳಿಯಂತಹ ಪಟ್ಟಣದಲ್ಲೂ ಈ ದಂಧೆ ವ್ಯಾಪಿಸಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಏನೇ ಆಗಲಿ ಬೇರೆಯವರ ಮಾತನ್ನು ಯಾವುದೇ ಕಾರಣಕ್ಕೂ ನಂಬಬಾರದು ಎನ್ನುವುದು ಇದಕ್ಕೆ.

Edited By

Manjula M

Reported By

Manjula M

Comments