ತಲ್ವಾರ್'ನಲ್ಲಿ ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲೆಬ್ರೇಟ್ : ಯುವಕ ಅರೆಸ್ಟ್...!!!

07 Jan 2019 12:57 PM | Crime
153 Report

ಭಿನ್ನ, ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸೋದು, ಮದುವೆ ಮಾಡಿಕೊಳ್ಳೋದು ಇತ್ತೀಚಿಗಂತೂ ಕಾಮನ್ ಆಗಿಬಿಟ್ಟಿದೆ. ಆದರೆ ಈಗ  ಬರ್ತ್ ಡೇ ಸೆಲೆಬ್ರೇಷನ್ ಈಗ ಫುಲ್ ಡಿಫರೆಂಟ್ ಸ್ಟೈಲ್ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಯುವಕ ತನ್ನ ಜನ್ಮ ದಿನವನ್ನ ವೆರಿ ವೆರಿ ಸ್ಪೆಷಲ್ ಮಾಡಿಕೊಳ್ಳು ಹೋಗಿ ಅರೆಸ್ಟ್ ಆಗಿರುವ ಘಟನೆ ಕಲ್ಬುರ್ಗಿ ಯಲ್ಲಿ ನಡೆದಿದೆ.

ತಲವಾರ್ನಿಂದ ಕೇಕ್ ಕತ್ತರಿಸಿ ಯುವಕನೊಬ್ಬ ಜನ್ಮ ದಿನಾಚರಣೆ ಆಚರಣೆ ಮಾಡುವುದರ ಮೂಲಕ ಪುಂಡಾಟ ಮೆರೆದಿರುವ ಘಟನೆ ಕಲಬುರ್ಗಿಯ ಕಮಲಾಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಜನವರಿ 1 ನ್ಯೂ ಇಯರ್ ಕಮ್ ಬರ್ತ್ ಡೇ ಸೆಲೆಬ್ರೇಷನ್ ಮಾಡಲೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಕಮಲಾಪುರ ಪಟ್ಟಣದ ನಿವಾಸಿ ಸೈಯದ್ ಇಮ್ರಾನ್ ನಾಗೂರೆ ಜನೆವರಿ 1ರಂದು ತಲವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ನಡುರಸ್ತೆಯಲ್ಲೇ ಶಸ್ತ್ರಾಸ್ತ್ರ ಹಿಡಿದು ಯುವಕ ಪುಂಡಾಟ ಮೆರೆದಿದ್ದು, ಕಾರ್ಯಕ್ರಮಕ್ಕೆ ಬಂದವರ ಕೈಯಲ್ಲೂ ಈತ ಶಸ್ತಾಸ್ತ್ರ ಕೊಟ್ಟು ಪುಂಡತನ ಮೆರೆದಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಕಮಲಾಪುರ ಪೊಲೀಸರು ಬಂಧಿಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

Edited By

Kavya shree

Reported By

Kavya shree

Comments