ಕುಡಿದ ಮತ್ತಿನಲ್ಲಿದ್ದ ದಂಪತಿಯ ಬೀದಿ ರಂಪಾಟ...!!!

07 Jan 2019 10:40 AM | Crime
178 Report

ಕುಡಿದ ಮತ್ತಿನಲ್ಲಿದ್ದ ಟೆಕ್ಕಿ  ದಂಪತಿ ನಡು ಬೀದಿಯಲ್ಲಿ ರಂಪಾಟ ನಡೆಸಿದ ಘಟನೆ ಬೆಂಗಳೂರಿನ ಹೆಬ್ಬಾಳ ಸರ್ಕಲ್ ನಲ್ಲಿ ನಡೆದಿದೆ. ನಿನ್ನೆ ರಾತ್ರಿ  ಮದ್ಯ ಸೇವನೆ ಮಾಡಿದ್ದ ದಂಪತಿ ಕಾರಿನಲ್ಲಿ ಬರುವಾಗ , ಹೆಬ್ಬಾಳ ಸರ್ಕಲ್ ಬಳಿ ಸಂಚಾರಿ  ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲು ಮುಂದಾಗಿದ್ದಾರೆ.  ಈ ವೇಳೆ ರಸ್ತೆ ಮಧ್ಯದಲ್ಲೇ ಕಾರು ನಿಲ್ಲಿಸಿದ್ದ ದಂಪತಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜಗಳವಾಡಿದ್ದಾರೆ. ಹೆಬ್ಬಾಳ ಸಂಚಾರ ಠಾಣೆಯ ಪೊಲೀಸ್ ರವಿ ಅವರು, ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡಿದ ಆರೋಪದ ಮೇಲೆ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ರೀತಿ ಆಗಿದ್ದು ಇದೇ ಮೊದಲೇನಲ್ಲಾ. ಬೆಂಗಳೂರಿನಲ್ಲಿ ವಾರಂತ್ಯ ಬಂದ್ರೆ ಸಾಕು ಈ ಥರದ್ದ ಘಟನೆಗಳು ಆಗಾಗ್ಗ ಮರುಕಳಿಸುತ್ತಲೇ ಇರುತ್ತವೆ. ರಸ್ತೆ ಮಧ್ಯೆಯೇ ನಿಂತು ಕುಡಿಯುವುದು, ಸರಿ ಹೊತ್ತಿನಲ್ಲಿ ಹುಡುಗ-ಹುಡುಗಿ ಸುತ್ತಾಡುವುದು, ಕಾರಿನೊಳಗೆ ರೊಮ್ಯಾನ್ಸ್ ಮಾಡಿ ಸಾರ್ವಜನಿಕರಿಗೆ ಮುಜುಗರ ತರುವುದು, ವಾಹನ ಸವಾರರಿಗೆ ಅಡ್ಡಿ ಪಡಿಸುವುದು ಈರದ್ದ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ.

Edited By

Kavya shree

Reported By

Kavya shree

Comments