ಪ್ರೀತ್ಸೋದ್ ತಪ್ಪಾ….! ಪ್ರೀತಿ ಕೊಂದ ಕೊಲೆಗಾರ…?

04 Jan 2019 11:13 AM | Crime
178 Report

ನಿನ್ನೆ ರಾತ್ರಿ ದುಷ್ಕರ್ಮಿಗಳ ತಂಡವೊಂದು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಪಂಜಿಮೊಗರು ಎಂಬಲ್ಲಿ ನಡೆದಿದೆ.ಮೃತ ಯುವಕನನ್ನು ರಾಕೇಶ್ ಎಂದು  ಗುರುತಿಸಲಾಗಿದೆ. ಯುವತಿಯೊಬ್ಬಳನ್ನು  26 ವರ್ಷದ ರಾಕೇಶ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಪ್ರೀತಿಸುತ್ತಿದ್ದ ಯುವತಿಯ ಅಣ್ಣನೇ ರಾಕೇಶ್ ಅವರನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದು ಪ್ರೀತಿಯೇ ಕೊಲೆಗೆ ಕಾರಣ ಎನ್ನಲಾಗಿದೆ.

ತನ್ನ ತಂಗಿಯ  ಪ್ರೀತಿ  ವಿಚಾರವಾಗಿ ಮಾತನಾಡಲು ರಾಕೇಶ್ ಅವರನ್ನ ಕರೆಸಿಕೊಂಡಿದ್ದ ದುಷ್ಕರ್ಮಿ ಮೊದಲೇ ಪ್ಲ್ಯಾನ್ ಮಾಡಿದ್ದಂತೇ ರಾಕೇಶ್ ಬರುತ್ತಿದ್ದಂತೇ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರೆನ್ನಲಾಗಿದೆ. ಈ ಹಿಂದೆಯೇ ರಾಕೇಶ್ ಗೆ ಪ್ರೀತಿ ವಿಚಾರವಾಗಿ ಅನೇಕ ಬಾರಿ ಎಚ್ಚರಿಕೆ ನೀಡಿದ್ದರು ರಾಕೇಶ್ ತನ್ನ ಪ್ರೀತಿ ಉಳಿಸಿಕೊಳ್ಳುತ್ತೇನೆ ಎಂದಿದ್ದರು.ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ  ಹುಡುಕಾಟಕ್ಕೆ  ಈಗಾಗಲೇ ಬಲೆ ಬೀಸಲಾಗಿದ್ದು, ತನಿಖಾ ಕಾರ್ಯ ಚುರುಕುಗೊಂಡಿದೆ. ಮಂಗಳೂರಿನಲ್ಲಿ ಪ್ರೀತಿ ವಿಚಾರವಾಗಿ ಕೊಲೆ ಮಾಡುವುದು ಇದೇ ಮೊದಲೇನಲ್ಲಾ. ಆದರೆ ನಗರದಲ್ಲಿ ಪದೇ ಪದೇ  ಇಂತಹ ಘಟನೆಗಳು ಮರುಕಳಿಸುತ್ತಿದ್ದು ಅಧಿಕಾರಿಗಳು ತಡೆಗಟ್ಟಲು ಜಾಗೃತರಾಗಬೇಕಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.

Edited By

Kavya shree

Reported By

Kavya shree

Comments