ಬ್ರಿಡ್ಜ್ ಕೆಳಗೆ ಬಿದ್ದಿತ್ತು ಆ ನಟಿಯ ಮೃತದೇಹ...!!!

03 Jan 2019 5:27 PM | Crime
547 Report

ಯುವತಿಯ  ಮೃತದೇಹವೊಂದು ಸೇತುವೆವೊಂದರ ಕೆಳಗೆ ಪತ್ತೆಯಾಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಆ ಮೃತದೇಹ  ಆಲ್ಬಂ ನಟಿಯೊಬ್ಬರದ್ದಾಗಿದ್ದು ನದಿ ಸೇತುವೆಯೊಂದರ ಅಡಿಯಲ್ಲಿ ಕಾಣಿಸಿಕೊಂಡಿದೆ. ಪತ್ತೆಯಾಗಿರುವ ಶವದ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಅಲ್ಲದೇ  ಬೆಳಿಗ್ಗೆ ಸ್ಥಳೀಯರು ಯುವತಿಯ ಮೃತದೇಹವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಮಹಾನದಿ ಬ್ರಿಡ್ಜ್ ಬಳಿ ಬಿಸಾಡಿದ ಸ್ಥಿತಿಯಲ್ಲಿ  ಕಂಡ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ವೇಳೆ ಆಕೆ ಆಲ್ಬಂ ನಟಿ ಸಿಮ್ರಾನ್ ಸಿಂಗ್ ಎಂದು ತಿಳಿದು ಬಂದಿದೆ. ನಟಿ ಮುಖದ ಮೇಲೆ ಕೆಲ ಗಾಯದ ಗುರುತುಗಳು ಕೂಡ ಪತ್ತೆಯಾಗಿದ್ದು, ಆಕೆ ಬಳಕೆ ಮಾಡುತ್ತಿದ್ದ ಬ್ಯಾಗ್ ಕೂಡ ಪಕ್ಕದಲ್ಲೇ ಸಿಕ್ಕಿದೆ.  ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ನಟಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿರುವ ಸ್ಥಳೀಯ ಬುರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನಟಿಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಬಂಧಿಸಿದಂತೆ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿದ್ದು ನಟಿಯ ಪೂರ್ವಪರ  ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ  ತನಿಖೆ ನಡೆಸಿ ಇದು ಕೊಲೆ ಎಂದು ಶಂಕಿಸಿದ್ದಾರೆ. ತನಿಖೆಯಿಂದ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿವೆ ಎಂದಿದ್ದಾರೆ.

Edited By

Kavya shree

Reported By

Kavya shree

Comments