ಹೊಸ ವರ್ಷಾಚರಣೆ ಸಮಯದಲ್ಲಿ ಸಿಲಿಂಡರ್ ಸ್ಫೋಟ..!

01 Jan 2019 5:19 PM | Crime
177 Report

ಹೊಸ ವರ್ಷವನ್ನು ಎಲ್ಲರು ತುಂಬಾ ಖುಷಿಯಿಂದ ಆಚರಣೆ ಮಾಡಿಕೊಳ್ಳುತ್ತಿದ್ದರೆ ಕೆಲವೊಂದು ಕಡೆ ಸಾಕಷ್ಟು ಅವಘಡಗಳು ನಡೆದುಹೋಗಿವೆ.. ಸಂಭ್ರಮ ಸಡಗರದಿಂದ ಇರಬೇಕಾದ ದಿನವಿದು.. ಅದರಲ್ಲಿ ಹೊಸ ವರ್ಷಾಚರಣೆ ವೇಳೆ ಲೂರ್ದ್ ಮಾತಾ ಚರ್ಚ್​ನಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಬಿದಿರುಮೆಳೆ ತೋಟದ ಮರಿಯಾದಾಸ್, ಥಾಮಸ್, ಸುದೀಪ್ (13), ಕಿರಣಬಾಬು, ಅಂಟನಿ ಫ್ರಾನ್ಸಿಸ್, ರವಿ, ಶಾಂತಿನಗರ ಡಿಪೋ ನಿವಾಸಿ ಶಾಯಿದ್​​(12)ಗೆ ಗಾಯಾಳುಗಳಿ. ಇನ್ನು ಕಿರಣಬಾಬು ಮತ್ತು ಮರಿಯಾದಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ ವರ್ಷದಂದು ಖುಷಿಯಾಗಿರಬೇಕಿದ್ದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ..

 

Edited By

Manjula M

Reported By

Manjula M

Comments