ಪೊಲೀಸ್ ಇನ್ಸ್ ಪೆಕ್ಟರ್ ಮಗಳಿಗೆ ಈಗಾದ್ರೆ ಜನ ಸಾಮಾನ್ಯರ ಮಕ್ಕಳ ಗತಿಯೇನು..!?

29 Dec 2018 10:31 AM | Crime
275 Report

ಹೆಣ್ಣು ಮಕ್ಕಳಿಗಾಗಿ ಎಷ್ಟೆ ಕಾನೂನನ್ನು ತಂದರೂ ಕೂಡ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಮಾತ್ರ ಕಡಿಮೆ ಆಗಿಲ್ಲ.. ನಿರಂತರ ಅತ್ಯಚಾರಗಳೂ ನಡಿಯುತ್ತಲೇ ಇವೆ.. ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎಸಗಿ ಠಾಣೆಯ ಮುಂದೆ ಎಸೆದು ಹೋಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ನಡೆದಿದೆ. ಅತ್ಯಚಾರಕ್ಕೆ ಒಳಗಾದ ಹುಡುಗಿ 11ನೇ ತರಗತಿಯ ವಿದ್ಯಾರ್ಥಿನಿ. ಆರೋಪಿಗಳನ್ನು ಅನುರಾಗ್ ಯಾದವ್ ಮತ್ತು ಆತನ ಸ್ನೇಹಿತರಾದ ಜಾಕಿ, ಶುಭಮ್ ಮತ್ತು ಅಭಿಷೇಕ್ ಎಂದು ಗುರುತಿಸಿದ್ದು, ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ..

ಈ ನಾಲ್ಕು ಹುಡುಗರು ಬೇರೆ ಬೇರೆ ಕಾಲೇಜಿನಲ್ಲಿ ಓದುತ್ತಿದ್ದರು. ಸಂತ್ರಸ್ತೆಗೆ ಪ್ರಜ್ಞೆ ಬಂದಾಗ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಗುರುತಿಸಿದ್ದಾಳೆ. ಹಾಗೇ ಘಟನೆಯ ಕುರಿತು ವಿವರಣೆಯನ್ನು ಕೂಡ ನೀಡಿದ್ದಾಳೆ. ಆರೋಪಿಯು ಕಕಡಿಯೋ ಪಟ್ಟಣದಲ್ಲಿರುವ ಫ್ಲಾಟ್‍ ಗೆ ಕರೆದುಕೊಂಡು ಹೋಗಿ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಎಸ್‍ಪಿ ಸಂಜೀವ್ ತಿಳಿಸಿದ್ದಾರೆ..ಆರೋಪಿಗಳು ವಿಚಾರಣೆ ಸಲುವಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ವಿಚಾರಣೆ ಮುಗಿದ ಬಳಿಕ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಅನಂತ್ ಡಿಯೋ ಅವರು ಹೇಳಿದ್ದಾರೆ. ಪೊಲೀಸ್ ಮಕ್ಕಳಿಗೆ ಈ ರೀತಿ ಆದರೆ ಜನ ಸಾಮಾನ್ಯರ ಮಕ್ಕಳ ಗತಿಯೇನು ..?

Edited By

Manjula M

Reported By

Manjula M

Comments