32 ಲಕ್ಷ ರೂ.ಮೌಲ್ಯದ ಗಾಂಜಾ ಬೆಳೆದ ಮೂವರ ಬಂಧನ..!

10 Dec 2018 4:36 PM | Crime
115 Report

ತಾರಾನಗರದ ಭೈರವ ತೀರ್ಥದ ದಾರಿಯಲ್ಲಿನ ಜಮೀನಿನಲ್ಲಿ ಗಾಂಜಾ ಬೆಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಅಂತಾಪುರ ಕೊರಚರಹಟ್ಟಿಯ ಹಂಪಣ್ಣ (40), ಗಂಗಾಧರ (42), ರುದ್ರೇಶ್ (42) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಮೂರು ಎಕೆರೆ ಜಮೀನಿನಲ್ಲಿ 3,200 ಕೆ.ಜಿಗೂ ಹೆಚ್ಚು ಗಾಂಜಾ ಬೆಳೆದಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಸಂಡೂರು ತಾಲೂಕಿನ ತಾರಾನಗರದಲ್ಲಿ ನಡೆದಿದೆ.  ಕಾರ್ಯಾಚರಣೆ ನಡೆಸಿದ ಸಂಡೂರು ಪೊಲೀಸರು ಎಸ್.ಪಿ ಅರುಣ ರಂಗರಾಜನ್ ನೇತೃತ್ವದಲ್ಲಿ ಗಾಂಜಾ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದಕ ವಸ್ತುಗಳನ್ನು ಬೆಳೆಯುವುದು ಅಪರಾಧ ಎಂದು ಗೊತ್ತಿದ್ದರು ಕೂಡ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ವಿಷಾಧನೀಯ ಎನ್ನಬಹುದು..

 

Edited By

Manjula M

Reported By

Manjula M

Comments