ಮದುವೆಗೆ ಒಪ್ಪದ ಪೋಷಕರು : ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣು..!

01 Dec 2018 10:01 AM | Crime
193 Report

ಪ್ರೀತಿಸಿ ಮದುವೆಯಾದವರಿಗೆ ಒಂದಲ್ಲ ಒಂದು ರೀತಿಯ ತೊಂದರೆಗಳು ಎದುರಾಗುತ್ತಲೆ ಇರುತ್ತವೆ..ಅದೇ ರೀತಿಯಾಗಿ  ಮದುವೆಗೆ ಪೋಷಕರು ನಿರಾಕರಿಸಿದ್ದಕ್ಕೆ ನೊಂದ ಪ್ರೇಮಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ. ಹಿರೇಬಾಗೇವಾಡಿ ಕುಂಬಾರ ಓಣಿಯ ಈರಣ್ಣ ಗೋಪಾಲ ಸಾಲಿಮನಿ (24) ಹಾಗೂ ಶ್ವೇತಾ ಶಂಕರ ಕುಂಬಾರ (21) ಮೃತ ಪ್ರೇಮಿಗಳಾಗಿದ್ದಾರೆ.

ಈರಣ್ಣ ಮತ್ತು ಶ್ವೇತ ಕೆಲ ವರ್ಷಗಳಿಂದ ಪರಸ್ವರ ಪ್ರೀತಿಸುತ್ತಿದ್ದರು. ತಮ್ಮಿಬ್ಬರ ಪ್ರೀತಿಯನ್ನು ಮನೆಯಲ್ಲಿ ಹೇಳಿದಾಗ  ಎರಡು ಕಡೆಯ ಪಾಲಕರು ಬುದ್ಧಿಮಾತು ಹೇಳಿದ್ದರು. ಇದರಿಂದ ಮನನೊಂದ ಪ್ರೇಮಿಗಳು ಈರಣ್ಣನ ಮನೆಯಲ್ಲಿ ಒಂದೇ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Edited By

Manjula M

Reported By

Manjula M

Comments