ಸರ್ಕಾರಿ ಬಸ್ ನ ಚಕ್ರಕ್ಕೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ..! ಆತ್ಮಹತ್ಯೆ ವಿಡಿಯೋ ವೈರಲ್

25 Sep 2018 3:43 PM | Crime
372 Report

ಸರ್ಕಾರಿ ಬಸ್ ಚಕ್ರಕ್ಕೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಭಯಾನಕ ಘಟನೆಯೊಂದು ಕೋಲಾರ ನಗರದ ಸಂತೆ ಗೇಟ್ ಬಳಿ ನಡೆದಿದೆ.ತಮಿಳುನಾಡು ಮೂಲದ ಕಣ್ಣನ್ (35) ಎಂಬುವವರು ಆರ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕೋಲಾರದ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

ಕಣ್ಣನ್ ಆತ್ಮಹತ್ಯೆಗೆ ಶರಣಾಗಿರುವ ಭಯಾನಕ ದೃಶ್ಯ ಸ್ಥಳದಲ್ಲಿರುವ ಪಾಪುಲರ್ ಫರ್ನಿಚರ್ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಸ್ ಸಂಚರಿಸುತ್ತಿರುವಾಗಲೇ ಕಣ್ಣನ್ ಅವರು ಏಕಾಏಕಿ ಬಸ್ಸಿನ ಹಿಂದಿನ ಚಕ್ರದಡಿ ತಲೆಕೊಟ್ಟಿದ್ದಾರೆ. ಪರಿಣಾಮ ಬಸ್ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದ್ರೆ ಕಣ್ಣನ್ ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿಲ್ಲ. ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Edited By

Manjula M

Reported By

Manjula M

Comments