ಗೌರಿ ಲಂಕೇಶ್ ಹಾಗೂ ಕಲಬುರಗಿ ಹತ್ಯೆ ಮಾಡಿದ ವ್ಯಕ್ತಿ ಒಬ್ಬನೇ..!?

15 Aug 2018 5:29 PM | Crime
372 Report

ಕಳೆದ ಮೂರು ವರ್ಷಗಳಿಂದಲೂ ರಾಜ್ಯದ ಖಾಕಿ ಪಡೆಗೆ ಸವಾಲಾಗಿದ್ದಂತಹ ಸಾಹಿತಿಯಾದ ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳ ಸುಳಿವು ಪತ್ತೆ ಹಚ್ಚುವಲ್ಲಿ ಎಸ್ ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

ಎಂ.ಎಂ. ಕಲಬುರ್ಗಿ ಹತ್ಯೆ ಮಾಡಿದ್ದು ಕೂಡ ನಾವೇ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ವ್ಯಕ್ತಿಯೊಬ್ಬ ತನಿಖಾ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದಲ್ಲದೇ ಕಲಬುರ್ಗಿ ಮಾತ್ರವಲ್ಲ ಪನ್ಸಾರೆ, ದಾಬೋಲ್ಕರ್ ಹತ್ಯೆಯಲ್ಲೂ ಕೂಡ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯ ಕೈವಾಡ ಇದೆ ಎನ್ನಲಾಗುತ್ತಿದೆ

Edited By

Manjula M

Reported By

Manjula M

Comments