ಶೀರೂರು ಲಕ್ಷ್ಮವರ ತೀರ್ಥ ಶ್ರೀಗಳ ಸಾವಿನ ಸುತ್ತಾ…ಅನುಮಾನದ ಹುತ್ತಾ..!

19 Jul 2018 1:28 PM | Crime
403 Report

ಉಡುಪಿ ಶ್ರೀ ಕೃಷ್ಣನ 8 ಮಠಗಳ ಮಠಾಧೀಶರಲ್ಲಿ ಒಬ್ಬರಾದ ಶೀರೂರು ಲಕ್ಷ್ಮವರ ತೀರ್ಥ ಶ್ರೀಗಳು (55) ಇಂದು ನಿಧನ ಹೊಂದಿದ್ದಾರೆ. ನಿನ್ನೆ ಅಂದರೆ ಬುಧವಾರ ಅವರಿಗೆ ಆಹಾರದಲ್ಲಿ ವ್ಯತ್ಯಾಸವಾದ್ದರಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಕಳೆದ ಕೆಲ ತಿಂಗಳ ಹಿಂದೆ ಶ್ರೀಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಿಂದೆಯೂ ಕೂಡ ಅವರು ಥೈರಾಯ್ಡ್ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆ ಪಡೆದ ನಂತರ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ತಪಾಸಣೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಶೀರೂರು ಶ್ರೀಗಳ ಆರೋಗ್ಯ ತುಂಬಾ ಹದಗೆಟ್ಟಿತ್ತು ಎನ್ನಲಾಗುತ್ತಿದೆ. ಹಾಗಾಗಿ ಇವರಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ಮೂಲಗಳು ವರದಿ ಮಾಡಿವೆ. ಇತ್ತೀಚೆಗೆ ಶ್ರೀಗಳ ದೇಹ ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲಶ್ರೀಗಳ ಹಠಾತ್ ನಿಧನದಿಂದಾಗಿ ಸಾಕಷ್ಟು ಅನುಮಾನದ ಪ್ರಶ್ನೆಗಳು ಎದ್ದಿವೆ. ಶ್ರೀಗಳಿಗೆ ಆಹಾರದಲ್ಲಿ ವಿಷ ಪ್ರಾಶನ ಮಾಡಲಾಗಿದೆ ಎಂದು ಶ್ರೀಗಳ ಆಪ್ತ ವಲಯದವರು ಹೇಳಿಕೆ ನೀಡಿದ್ದಾರೆ. ಹಿನ್ನಲೆಯಲ್ಲಿ ತೀವ್ರವಾದ ತನಿಖೆಯನ್ನು ನಡೆಸಲಾಗುತ್ತಿದೆ.ಆಹಾರದಲ್ಲಿ ವಿಷ ಬೆರೆಸಿದ್ದರೆ ಶ್ರೀಗಳಿಗೆ ಮಾತ್ರವೇ ಹೀಗೆ ಆಗಲು ಸಾಧ್ಯ?, ಹಾಗಾದರೆ ಶ್ರೀಗಳಿಗೆ ಮಾತ್ರ ಪ್ರತ್ಯೇಕ ಆಹಾರ ನೀಡಲಾಗಿತ್ತೇ?, ವಿಷವನ್ನು ಆಹಾರದಲ್ಲಿ ಹೇಗೆ, ಯಾರು ಸೇರಿಸಿದರು ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸ್ಪಷ್ಟ ಉತ್ತರ ಲಭ್ಯವಾಗುತ್ತಿಲ್ಲ.

 ಶ್ರೀಗಳನ್ನು ಪರೀಕ್ಷೆ ಮಾಡಿದ ವೈದ್ಯರು ಮಾತ್ರ ಶ್ರೀಗಳು ಸೇವಿಸಿದ ಆಹಾರದಲ್ಲಿ ವಿಷ ಬೆರೆತಿದೆ ಎಂದು ಹೇಳಿದ್ದಾರೆ. ಅಥವಾ ಫುಡ್ ಪಾಯ್ಸನ್ ಕೂಡ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಸ್ತುತ ಯಾವುದೇ ವಿಷಯಗಳು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ಪೊಲೀಸರ ಕಣ್ಗಾವಲಿನಲ್ಲಿ ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಇದಾದ ಬಳಿಕ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಹೆಚ್ಚಿನ ವಿಚಾರಗಳು ಲಭ್ಯವಾಗಲಿದೆ ಎಂದು ಕೆಸಿಎಂ ಆಸ್ಪತ್ರೆಯ ಡಾ. ಅವಿನಾಶ್ ಶೆಟ್ಟಿ ಅವರು ಹೇಳಿದ್ದಾರೆ. ಫುಡ್ ಪಾಯ್ಸನ್ ಆಗುವುದಾದರೆ ಕೇವಲ ಸ್ವಾಮೀಜಿ ಮಾತ್ರ ಏಕೆ ಆಯಿತು?, ರೀತಿ ಆಗಿದ್ದರೆ ಎಲ್ಲರಿಗೂ ಆಗಬೇಕಿತ್ತು. ಇತ್ತೀಚೆಗೆ ಉಡುಪಿ ಮಠದಲ್ಲಿ ದೇವರ ವಿಗ್ರಹದ ಸ್ಥಳ ಬದಲಾವಣೆ ಆದುದಕ್ಕೆ ಶ್ರೀಗಳು ಸಾಕಷ್ಟು ನೊಂದು ಕೊಂಡಿದ್ದರು. ಅಷ್ಟೇ ಅಲ್ಲದೇ, ಅವರ ನೇರ ನುಡಿಯ ಸ್ವಭಾವವೂ ಕೂಡ ಅವರ ಪಾಲಿಗೆ ಮುಳುವಾಗಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಬರ್ಕೂರು ಸಂಸ್ಥಾನದ ಸ್ವಾಮೀಜಿ ಸಂತೋಷ ಭಾರತಿ ಶ್ರೀಗಳು ಸಂಶಯ ವ್ಯಕ್ತ ಪಡಿಸಿದ್ದಾರೆ.

Edited By

Manjula M

Reported By

Manjula M

Comments