ಅತ್ತೆ ಮಗಳು ಕೈಕೊಟ್ಳು ಅಂತ ವಿಷ ಕುಡಿದ ಯುವಕ..!

04 Jul 2018 12:53 PM | Crime
404 Report

ಪ್ರೀತಿಸಿದ ಮೇಲೆ ಮದುವೆಯಾಗಬೇಕು.. ಇಲ್ಲ ಅಂದರೆ ಸುಮ್ಮನಿರಬೇಕು. ಅದನ್ನ ಬಿಟ್ಟು ಪ್ರೀತಿಸಿದವಳು ಕೈ ಕೊಟ್ಟಳು ಅಂತ ವಿಷ ಕುಡಿಯೋದಾ.. ಈ ರೀತಿ ಅತ್ತೆ ಮಗಳು ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಪಡುವಾರಳ್ಳಿಯಲ್ಲಿ ನಡೆದಿದೆ. ಪಡುವಾರಳ್ಳಿಯ ನಿವಾಸಿ ಸತೀಶ್ (23) ಮೃತಪಟ್ಟ ಯುವಕನಾಗಿದ್ದಾನೆ.

ಪಡುವಾರಳ್ಳಿಯ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತೀಶ ತನ್ನ ಅತ್ತೆ ಮಗಳನ್ನು ವಿವಾಹವಾಗಲು ನಿಶ್ಚಿಯಿಸಿದ್ದ. ಆದರೆ ಅತ್ತೆ ಮಗಳು ಬೇರೆ ಯುವಕನೊಂದಿಗೆ ಮದುವೆಯಾದ ಹಿನ್ನೆಲೆಯಲ್ಲಿ ಮನನೊಂದು ಕಳೆದ ಒಂದು ವಾರದ ಹಿಂದೆಯೇ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ  ಕೂಡಲೇ ಮನೆಯವರು ಆತನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಜಯಲಕ್ಷ್ಮಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Edited By

Manjula M

Reported By

Manjula M

Comments