ಬ್ಲ್ಯಾಕ್ ಕೋಬ್ರಾ ಪತ್ತೆಗಾಗಿ ಪೊಲೀಸರಿಂದ ವಿಶೇಷ ತಂಡ ರಚನೆ..!

04 Jun 2018 2:22 PM | Crime
336 Report

ದುನಿಯಾ ವಿಜಯ್ ಎಫ್ ಐಆರ್ ದಾಖಲಾದ ಬಳಿಕ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಯಾದ ಹಾಗೂ ಆರೋಪಿ ಪರಾರಿಯಾಗಲು ಸಹಕರಿಸಿದ್ದಕ್ಕೆ ನಟ ದುನಿಯಾ ವಿಜಯ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.

ಎಫ್ಐಆರ್ ದಾಖಲಾಗುತ್ತಿದ್ದಂತೆ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ. ಮಾಸ್ತಿಗುಡಿ ದುರಂತಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕ ಸುಂದರ್ ಪಿ. ಗೌಡ ಬಂಧನಕ್ಕೆ ಕೋರ್ಟ್ ಆದೇಶವನ್ನು ನೀಡಿತ್ತು. ಪೊಲೀಸರು ನಿರ್ಮಾಪಕರ ಬಂಧನಕ್ಕೆ ತೆರಳಿದ್ದ ವೇಳೆ ಸುಂದರ್ ಪರಾರಿಯಾಗಲು ವಿಜಯ್  ಕೂಡ ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಶೇಷ ತಂಡವೊಂದನ್ನು ರಚನೆ ಮಾಡಿ ದುನಿಯಾ ವಿಜಯ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Edited By

Manjula M

Reported By

Manjula M

Comments