ಸಾಲುಮರದ ತಿಮ್ಮಕ್ಕ ಸಾವಿನ ವದಂತಿ : ಆರೋಪಿ ಬಂಧನ

30 May 2018 12:29 PM | Crime
552 Report

ಸ್ವಲ್ಪ ದಿನಗಳ ಹಿಂದೆ ಸಾಲುಮರದ ತಿಮ್ಮಕ್ಕ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವದಂತಿ ಹಬ್ಬಿತ್ತು. ಆದರೆ ಈಗ  ಆ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.  

ಕೆ.ಆರ್. ನಗರ ತಾಲೂಕಿನ ಹರದನಹಳ್ಳಿ ನಿವಾಸಿ ಪ್ರದೀಪ್ ಗೌಡ (26) ಎಂಬಾತ ಈ ವದಂತಿಯನ್ನು ಹಬ್ಬಿಸಿದ್ದನು. ಬ್ಯಾಡರಹಳ್ಳಿಯ ಬಾಲಾಜಿ ಬಡಾವಣೆಯಲ್ಲಿ ವಾಸವಿದ್ದ ಈತ ಓಲಾ ಹಾಗೂ ಉಬರ್ ಕಂಪನಿಯಡಿ ಕ್ಯಾಬ್ ಓಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಸಾಲುಮರದ ತಿಮ್ಮಕ್ಕ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿ ಪ್ರದೀಪ್ ಗೌಡ ವದಂತಿ ಹಬ್ಬಿಸಿದ್ದ. ಹಾಗಾಗಿ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್ ಮೇ. 24 ರಂದು ದೂರು ನೀಡಿದ್ದರು. ಸ್ನೇಹಲೋಕ ಹೆಸರಿನ ಫೇಸ್ ಬುಕ್ ಗ್ರೂಪ್ ಒಂದರಲ್ಲಿರಲ್ಲಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಪೋಸ್ಟ್ ಅನ್ನು ಪೋಸ್ಟ್ ಮಾಡಲಾಗಿತ್ತು. ಈ ಫೋಸ್ಟ್ ವೈರಲ್  ಕೂಡ ಆಗಿತ್ತು. ಬಳಿಕ ಸಾಲು ಮರದ ತಿಮ್ಮಕ್ಕನ ದತ್ತು ಪುತ್ರ ಉಮೇಶ್ ಅವರು ಬಂದು ದೂರು ನೀಡಿದ್ದರು. ಆ ಬೆನ್ನಲ್ಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Edited By

Manjula M

Reported By

Manjula M

Comments