ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಗರಂ ಆಗಿದ್ದು ಯಾಕೆ ಗೊತ್ತಾ?

23 Apr 2018 12:39 PM | Crime
597 Report

ಇತ್ತಿಚಿಗೆ ನಕಲಿ ಖಾತೆ ತೆಗೆದು ಅದನ್ನು ರುರುಪಯೋಗ ಪಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದು ಸಿನಿಮಾ ಮಂದಿಯನ್ನು ಕೂಡ ಬಿಟ್ಟಿಲ್ಲ. ತಮ್ಮ ಹೆಸರಲ್ಲಿ ಫೇಸ್ ಬುಕ್ ಹಾಗೂ ಇನ್​​ಸ್ಟಾಗ್ರಾಂನಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸ್ಯಾಂಡಲ್ ​ವುಡ್ ​ನ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಅವರು ಸಿಡುಕಾಗಿದ್ದಾರೆ.

ನಟ ಧ್ರುವ ಸರ್ಜಾ ಅವರು ಇದೂವರೆಗೆ ಫೇಸ್​ಬುಕ್​ ಆಗಲೀ, ಇನ್​​ಸ್ಟಾಗ್ರಾಂನಲ್ಲಾಗಲೀ ಯಾವುದೇ ಖಾತೆಯನ್ನು ತೆರೆದಿಲ್ಲ. ಆದರೂ ಅವರ ಹೆಸರಲ್ಲಿ ಯಾರೋ  ನಕಲಿ ಖಾತೆ ಕ್ರಿಯೆಟ್ ಮಾಡಿ ಎಲ್ಲರಿಗೂ ಅಶ್ಲೀಲ ಮೆಸೇಜ್​ ಮಾಡ್ತಿದ್ದಾರಂತೆ.ಇದನ್ನು ತಿಳಿದ ಧ್ರುವ, ಅವರು ತಮ್ಮ ಟ್ವಿಟ್ಟರ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ನನ್ನ ಹೆಸರಿನ ಯಾವುದೇ ಫೇಸ್​ಬುಕ್​, ಇನ್​ಸ್ಟಾಗ್ರಾಂ ಖಾತೆಗಳಿಲ್ಲ. ಹೆಸರಿನಲ್ಲಿರೋ ನಕಲಿ ಖಾತೆಗಳಿಂದ ಅನ್ ​ಫಾಲೋ ಮಾಡಿ. ಅಲ್ಲದೇ, ಮತ್ತೆ ಇಂತಹ ಮೆಸೇಜ್​ಗಳು ರಿಪೀಟ್ ಆದಲ್ಲಿ ಸೈಬರ್​ ಕ್ರೈಂಗೆ ದೂರು ನೀಡಿ ಅಂತಾ ಅಭಿಮಾನಿಗಳಲ್ಲಿ ಧ್ರುವ ಮನವಿಯನ್ನು ಮಾಡಿಕೊಂಡಿದ್ಧಾರೆ.

Edited By

Manjula M

Reported By

Manjula M

Comments