ಪೋಷಕರೇ ಹುಷಾರ್- ಹುಷಾರ್ ನಿಮ್ಮ ಮಕ್ಕಳ ಕೈಗೆ ಬೈಕ್ ಕೊಡುವ ಮುನ್ನ ಒಮ್ಮೆ ಗಮನಿಸಿ..!

02 Mar 2018 6:22 PM | Crime
605 Report

ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳ ಕೈಗೆ ದುಬಾರಿ ಬೈಕ್‌ಗಳನ್ನು ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘನೆ ಆಗುವುದಲ್ಲದೇ ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಇಂತಹ ಪ್ರವೃತ್ತಿಗಳನ್ನು ತಪ್ಪಿಸಲು ಕೆಲ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.

ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳ ಕೈಗೆ ದುಬಾರಿ ಬೈಕ್‌ಗಳನ್ನು ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘನೆ ಆಗುವುದಲ್ಲದೇ ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಇಂತಹ ಪ್ರವೃತ್ತಿಗಳನ್ನು ತಪ್ಪಿಸಲು ಕೆಲ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಮೊನ್ನೆಯಷ್ಟೇ ಹೈದ್ರಾಬಾದ್‌ನಲ್ಲೂ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದ 10 ಪೋಷಕರನ್ನು ಜೈಲಿಗೆ ಹಾಕಲಾಗಿದೆ. ಜೊತೆಗೆ ನಿಯಮ ಬಾಹಿರವಾಗಿ ಬೈಕ್ ಚಾಲನೆ ಮಾಡಿದ ತಪ್ಪಿಗೆ 14ಕ್ಕೂ ಹೆಚ್ಚು ಬಾಲಕರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಿಲಾಗಿದೆ.

ಮೊನ್ನೆಯಷ್ಟೇ ಹೈದ್ರಾಬಾದ್‌ನಲ್ಲೂ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದ 10 ಪೋಷಕರನ್ನು ಜೈಲಿಗೆ ಹಾಕಲಾಗಿದೆ. ಜೊತೆಗೆ ನಿಯಮ ಬಾಹಿರವಾಗಿ ಬೈಕ್ ಚಾಲನೆ ಮಾಡಿದ ತಪ್ಪಿಗೆ 14ಕ್ಕೂ ಹೆಚ್ಚು ಬಾಲಕರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಿಲಾಗಿದೆ. ಅತ್ತ ಕಾನೂನು ಬಾಹಿರವಾಗಿ ಬೈಕ್ ಸವಾರಿ ಮಾಡುತ್ತಿದ್ದ 14 ಬಾಲಕರನ್ನು 1 ದಿನ ಮಟ್ಟಿಗೆ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದ್ದು, ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಮೋಟಾರ್ ವೆಹಿಕಲ್ ಸೆಕ್ಷನ್ 180ರ ಅಡಿ ಪ್ರಕರಣ ದಾಖಲಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, 1 ದಿನದ ಜೈಲು ವಾಸದ ಜೊತೆಗೆ ರೂ. 500 ದಂಡವನ್ನು ಸಹ ವಸೂಲಿ ಮಾಡಲಾಗುತ್ತಿದೆ. ಇದಷ್ಟೇ ಅಲ್ಲದೇ ಅಪ್ರಾಪ್ತ ಬಾಲಕರು ನಿಯಮ ಉಲ್ಲಂಘಿಸಿ ಚಾಲನೆ ಮಾಡಿದ ಹಿನ್ನೆಲೆ ಇದುವರೆಗೆ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ ತಿಂಗಳು ಫೆಬ್ರುವರಿ ಒಂದರಲ್ಲೇ 50ಕ್ಕೂ ಹೆಚ್ಚು ಪೋಷಕರು ಜೈಲಿನ ಕಂಬಿ ಎಣಿಸಿ ಬಂದಿದ್ದಾರೆ.

 

 

 

Edited By

Shruthi G

Reported By

Madhu shree

Comments