ಹಗಲಲ್ಲಿ ಕನ್ನಡ ಪರ ಹೋರಾಟಗಾರನಾಗಿರುತ್ತಿದ್ದ ,ಆದ್ರೆ ರಾತ್ರಿ ವೇಳೆ ಏನ್ಮಾಡ್ತಿದ್ದ ಗೊತ್ತಾ?

20 Nov 2017 2:02 PM | Crime
535 Report

ತನ್ನನ್ನು ತಾನು ಕರ್ನಾಟಕ ರಕ್ಷಣಾ ವೇದಿಕೆಯ ಹಲಸೂರಿನ ಜೋಗುಪಾಳ್ಯ ವಾರ್ಡ್​ನ ಅಧ್ಯಕ್ಷನೆಂದು ಹೇಳಿಕೊಳ್ಳುತ್ತಾನೆ. ಕನ್ನಡ ಪರ ಹೋರಾಟಗಾರನೆಂದು ಫ್ಲೆಕ್ಸ್​​ಗಳ ಮೇಲೆ ತನ್ನ ಫೋಟೋ ಹಾಕಿಸಿಕೊಳ್ಳತ್ತಾನೆ, ಆದರೆ ರಾತ್ರಿ ಆಗುತ್ತಿದ್ದತೆಯೇ ತನ್ನ ಸಹಚರರೊಂದಿಗೆ ದರೋಡೆಗೆ ನಿಲ್ಲುತ್ತಾನೆ.

ಕೆಲಸ ಮುಗಿಸಿ ಮನೆಗೆ ಮರುಳುತ್ತಿರುವವರನ್ನು ಗುರಿ ಮಾಡಿಕೊಂಡು ಇವರು ದೋಚುತ್ತಾರೆ. ವಿಚಿತ್ರವೆಂದರೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಎಂದು ಹೇಳಿಯೇ ಕೃತ್ಯ ವೆಸಗುತ್ತಾರೆ. ಇತ್ತೀಚಿಗೆ ಕೂಡ ಅದೇ ರೀತಿ ಮಾಡಿದ್ದಾರೆ, ಹಲಸೂರಿನ ಮೆಟ್ರೋ ನಿಲ್ದಾಣದ ಬಳಿ ಟೈಸನ್​ ಎಂಬುವವರ ಬಳಿ ಇದ್ದ ಮೊಬೈಲ್​, ಹಣ ಹಾಗೂ ವಾಚ್​ನ್ನು ಕಿತ್ತುಕೊಂಡಿದ್ದಾರೆ. ನಂತರ ಚಾಕು ತೋರಿಸಿ 4 ಸಾವಿರ ರೂಪಾಯಿ ಹಣ ಕೂಡ ಡ್ರಾ ಮಾಡಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ಅದೃಷ್ಟ ಕೆಟ್ಟಿತ್ತು. ಹಲಸೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾದ ಕಾರಣ ಪೊಲೀಸರು ವರುಣ್​ ಹಾಗೂ ತಂಡವನ್ನು ಬಂಧಿಸಿದೆ. 

Edited By

Hema Latha

Reported By

Madhu shree

Comments

Cancel
Done