'ಬೇಟಿ ಬಚಾವೋ ಬೇಟೀ ಪಡಾವೋ' ಪೋಸ್ಟರ್ ನಲ್ಲಿ ದೇಶದ್ರೋಹಿ ಆಸಿಯಾ ಫೋಟೋ ಪ್ರಕಟ

12 Oct 2017 9:22 PM | Crime
294 Report

ಶ್ರೀನಗರ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ 'ಬೇಟೀ ಬಚಾವೋ ಬೇಟೀ ಪಡಾವೋ' ಯೋಜನೆಯ ಪ್ರಚಾರ ಅಭಿಯಾನದ ಪೋಸ್ಟರ್ ನಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ, ದೇಶದ್ರೋಹಿ ಆಸಿಯಾ ಅಂದ್ರಾಬಿ ಫೋಟೋ ಇದೀಗ ವಿವಾದಕ್ಕೀಡಾಗಿದೆ.

ಶ್ರೀನಗರ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ 'ಬೇಟೀ ಬಚಾವೋ ಬೇಟೀ ಪಡಾವೋ' ಯೋಜನೆಯ ಪ್ರಚಾರ ಅಭಿಯಾನದ ಪೋಸ್ಟರ್ ನಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ, ದೇಶದ್ರೋಹಿ ಆಸಿಯಾ ಅಂದ್ರಾಬಿ ಫೋಟೋ ಇದೀಗ ವಿವಾದಕ್ಕೀಡಾಗಿದೆ.

ದಿ. ಪ್ರಧಾನಿ ಇಂದಿರಾ ಗಾಂಧಿ, ಲತಾ ಮಂಗೇಶ್ಕರ್. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗಗನಯಾತ್ರಿ ಕಲ್ಪನಾ ಚಾವ್ಲಾ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಮದರ್ ತೆರೇಸಾ ಸಾಲಿನಲ್ಲಿ ಅಂದ್ರಾಬಿ ಫೋಟೋ ಲಗತ್ತಿಸಲಾಗಿದೆ. ಅನಂತನಾಗ್ ಜಿಲ್ಲೆಯ ಪ್ರವಾಸೋದ್ಯಮ ಉತ್ಸವದಲ್ಲಿ ಹಾಕಲಾಗಿರೋ ಈ ಪೋಸ್ಟರ್ ನಲ್ಲಿ ಇಂಥದ್ದೊಂದು ಎಡವಟ್ಟು ಆಗಿದೆ.

ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಮಾಡುವಂತೆ ಕಾಶ್ಮೀರ ಕಣಿವೆಯ ಮಹಿಳೆಯರನ್ನು ಪ್ರಚೋದಿಸುವುದು ಮತ್ತು ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದ ಮೇಲೆ ಕಳೆದ ಏಪ್ರಿಲ್ ನಲ್ಲಿ ಈಕೆಯನ್ನು ಬಂಧಿಸಲಾಗಿತ್ತು. ಇಂಥ ಭಯೋತ್ಪಾದಕಿಯ ಫೋಟೋ ಬೇಟೀ ಬಚಾವೋ ಬೇಟೀ ಪಡಾವೋ ಯೋಜನೆಯ ಪ್ರಕಾರ ಅಭಿಯಾನದ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿರುವುದಕ್ಕೆ ಅತೀವ ಆಕ್ರೋಶ ವ್ಯಕ್ತವಾಗಿದೆ.

Edited By

venki swamy

Reported By

Sudha Ujja

Comments