ರಾಜ್ಯ ದಲ್ಲಿ ಸದ್ದಿಲ್ಲದೇ ನಡಿತಿದೆ ಹೆಣ್ಣು ಮಕ್ಕಳ ಮಾರಾಟ ಜಾಲ ?

05 Oct 2017 11:58 AM | Crime
475 Report

ರಾಜ್ಯ ದಲ್ಲಿ ಪ್ರತಿ ಎರಡು ಗಂಟೆಗೆ ಒಬ್ಬ ಹೆಣ್ಣು ಮಕ್ಕಳು ನಾಪತ್ತೆಯಾಗ್ತಿದ್ದಾರೆ. ರಾಜ್ಯ ಪೊಲೀಸರಿಂದ ಹೊರಬಿದ್ದ ಬೆಚ್ಚಿಬೀಳಿಸೊ ಮಾಹಿತಿ , ಕರ್ನಾಟಕದಲ್ಲಿ ಪ್ರತಿದಿನ 14 ಯುವತಿಯರ ಕಿಡ್ನಾಪ್ ಕೇಸ್ ದಾಖಲಾಗುತಿದೆ. ಕಳೆದ ಮೂರೂ ವರ್ಷಗಳಲ್ಲಿ ಒಟ್ಟು 11,822 ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗಿವೆ.

ರಾಜ್ಯ ದ ಪ್ರತಿ ಪ್ರಜೆಗೂ ಕೂಡ ಎಚ್ಚರಿಕೆಯ ಸಂದೇಶ ಒಂದು ವೇಳೆ ನಿಮ್ಮನೆಯಲ್ಲಿ ಹೆಣ್ಣು ಮಕ್ಕಳಿದ್ರೆ ಹುಷಾರಾಗಿರಿ. ರಾಜ್ಯ ದಲ್ಲಿ ಸದ್ದಿಲ್ಲದೇ ಹರಡುತ್ತಿದೆ ಹೆಣ್ಣು ಮಕ್ಕಳ ಮಾರಾಟ ಜಾಲ. ಕಳೆದ ಮೂರೂ ವರ್ಷಗಳಲ್ಲಿ ಹೆಣ್ಣು ಮಕ್ಕಳ ನಾಪತ್ತೆ ಪರಕಣಗಳು ಇಲ್ಲಿದೆ ನೋಡಿ.

ಇದು ನಾಪತ್ತೆನಾ....? ಅಪಹರಣನಾ...?

 

ಜಿಲ್ಲೆ                

ಅಪ್ರಾಪ್ತರು 

ಯುವತಿಯರು 

ಒಟ್ಟುಪ್ರಕರಣ 

ಪತ್ತೆ

ನಾಪತ್ತೆ

ಮೈಸೂರು

329

1185

1514

1359

162

ಚಿತ್ರದುರ್ಗ

168

783

931

661

102

ಶಿವಮೊಗ್ಗ 

05

840

845

716

129

ಬೆಳಗಾವಿ

163

796

959

687

272

ರಾಮನಗರ

224

1540

1764

1416

358

2000 ಹೆಚ್ಚು ಪ್ರಕರಣಗಳ ಬಗ್ಗೆ ಕಿಂಚಿತ್ತೂ ಕೂಡ ಮಾಹಿತಿಯಿಲ್ಲ . ಅಷ್ಟೇಯಲ್ಲದೇ ಪತ್ತೆಯಾಗದ ಪ್ರಕರಣಗಳು 2,564 . ಸಣ್ಣ  ಸುಳಿವು ನೀಡದೆ ನಡಿತಿದೆ ಈ ಅಪಹರಣದ ಕಾರ್ಯ . ಈ ಕಾರ್ಯದಲ್ಲಿ ಹಿಂದೆ ಒಂದು ದೊಡ್ಡ ಜಾಲವಿದೆ. ಪೊಲೀಸರಿಗೆ ಈ ಪ್ರಕರಣಗಳು ಕಬ್ಬಿಣದ ಕಡಲೆಯಂತಾಗಿದೆ. ಹೆಣ್ಣು ಮಕ್ಕಳ ಈ ಪ್ರಕರಣದ ಜಾಲವನ್ನು ಪೊಲೀಸರು ಭೇದಿಸಿ ರಾಜ್ಯದ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಂತಾಗಲಿ ಎಂಬುದು ನಮ್ಮ ಆಶಯ . 

 

Edited By

Shruthi G

Reported By

Madhu shree

Comments