ವಿಧಾನಸಭೆಯಲ್ಲಿ ಬಾಂಬ್: ಹುಸಿ ಕರೆ ಮಾಡಿದ ವ್ಯಕ್ತಿ ಪೋಲೀಸರ ಕೈಸೆರೆ

04 Oct 2017 10:24 AM | Crime
300 Report

ಉತ್ತರಪ್ರದೇಶ ರಾಜ್ಯದ ವಿಧಾನಸಭೆಯಲ್ಲಿ ಬಾಂಬ್ ಇರಿಸಿರುವುದಾಗಿ ಹುಸಿ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ನರ್ಸಿನ್ಹ್ ಬಂಧಿತ ವ್ಯಕ್ತಿಯೆಂದು ಗುರ್ತಿಸಲಾಗಿದೆ.

ಶೋಧ ಕಾರ್ಯಾಚರಣೆ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂಬುದು ತಿಳಿದುಬಂದಿತ್ತು. ಬಳಿಕ ಆರೋಪಿಗಾಗಿ ಪೊಲೀಸರು ಹುಡುಕಾಟ ಅರಂಭಿಸಿದ್ದರು. ನರ್ಸಿನ್ಹ್ ಬಂಧಿತ ವ್ಯಕ್ತಿಯೆಂದು ಹೇಳಲಾಗುತ್ತಿದೆ. ಆರೋಪಿ ಶಹಜಹಾನ್ಪುರ್ ಜಿಲ್ಲೆಯ ಬಬ್ರಾ ಗ್ರಾಮದ ನಿವಾಸಿಯಾಗಿದ್ದಾನೆ. ಕಳೆದ ಭಾನುವಾರ ಉತ್ತರಪ್ರದೇಶ ರಾಜ್ಯ ವಿಧಾನಸಭೆಯಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಯೊಬ್ಬ ಪೊಲೀಸರಿಗೆ ಕರೆ ಮಾಡಿದ್ದ. ಕೂಡಲೇ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

Edited By

Suresh M

Reported By

Madhu shree

Comments