ಜೆ.ಪಿ.ನಗರದಲ್ಲಿ ಭಯಭೀತರಾದ ಸ್ಥಳೀಯರು

20 Sep 2017 10:02 PM | Crime
402 Report

ಜೆ.ಪಿ.ನಗರದ 6ನೇ ಹಂತದ ಪ್ಲೇ ಹೋಮ್ ಒಂದರ ಮುಂಭಾಗ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಕೆಲ ಸ್ಥಳೀಯರು ಈ ವಸ್ತುವನ್ನ ಕಂಡ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಜೆ.ಪಿ.ನಗರದ 6ನೇ ಹಂತದ ಪ್ಲೇ ಹೋಮ್ ಒಂದರ ಮುಂಭಾಗ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಕೆಲ ಸ್ಥಳೀಯರು ಈ ವಸ್ತುವನ್ನ ಕಂಡ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಒಂದು ದೊಡ್ಡ ಬ್ಯಾಗ್ ಮೇಲೆ ಮೊಬೈಲ್ ಫೋನನ್ನಿಟ್ಟು ಬ್ಯಾಗ್`ನೊಳಗೆ ವಸ್ತುವಿಗೆ ವೈರ್ ಸುತ್ತಿ ಅದನ್ನ ಮೊಬೈಲ್`ಗೆ ಕನೆಕ್ಟ್ ಮಾಡಲಾಗಿದೆ. ಜೊತೆಗೆ ಒಂದು ರೀತಿಯ ಪೌಡರ್ ಸಹ ಇತ್ತು ಎನ್ನಲಾಗಿದ್ದು, ಬಾಂಬ್ ಇರಬಹುದೆಂದು ಅನುಮಾನಗೊಂಡ ಯುವಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಶಾಲೆಯ ಸಿಸಿಟಿವಿ ಮುಂಭಾಗದ ಸಮೀಪದಲ್ಲೇ ಅನುಮಾನಾಸ್ಪದ ವಸ್ತು ಸಿಕ್ಕಿದ್ದು, ಸಿಸಿಟಿವಿ ವಿಡಿಯೋ ವಶಪಡಿಸಿಕೊಂಡಿರುವ ಪೊಲೀಸರಿಗೆ ಕೃತ್ಯದ ಹಿಂದಿರುವ ಕೈವಾಡದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪುಟ್ಟೇಮಹಳ್ಳಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಅನುಮಾನಾಸ್ಪದ ವಸ್ತು ಸಿಕ್ಕ ರಸ್ತೆಯ ಸಂಚಾರ ನಿರ್ಬಂಧಿಸಲಾಗಿದ್ದು, ಯಾರಾದರೂ ಕಿಡಿಗೇಡಿಗಳು ಬೇಕಂತಲೇ ಈ ಕೃತ್ಯ ಎಸಗಿದ್ದಾರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

Edited By

venki swamy

Reported By

Sudha Ujja

Comments