ಗೌರಿ ಲಂಕೇಶ್ ಹತ್ಯೆಗೆ ಗ್ರೂಪ್ ಕಾಲ್ ಸುಳಿವು ?

19 Sep 2017 6:40 PM | Crime
212 Report

ಸೆಪ್ಟೆಂಬರ್ 5 ರ ಮಂಗಳವಾರ ರಾತ್ರಿ 7:55 ಸುಮಾರಿಗೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಇದೇ ಸಂದರ್ಭದಲ್ಲಿ ಎಂಟು ಮಂದಿ ಏಕಕಾಲದಲ್ಲಿ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿರುವ ಮಾಹಿತಿ ದೊರೆತಿದೆ. ಈ ಮಾಹಿತಿ ಆಧರಿಸಿ ಸಿಟ್ ತನಿಖಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

25 ಲಕ್ಷ ಕರೆ ವಿವರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಗಾಂಧಿನಗರದಿಂದ ರಾಜರಾಜೇಶ್ವರಿನಗರದವರೆಗಿನ ಮೊಬೈಲ್ ಟವರ್ಗಳ 25 ಲಕ್ಷ ಕರೆಗಳ ವಿವರಗಳ ಮಾಹಿತಿ ಕಲೆ ಹಾಕಿದ, ಸಿಟ್ ಅಧಿಕಾರಿಗಳು, ಒಂದೊಂದೇ ಕರೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಒಂದೇ ಕರೆಯಲ್ಲಿ 8 ಮಂದಿ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿರುವ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆಲವು ಪ್ರದೇಶ ಹಾಗೂ ಹೊರ ರಾಜ್ಯಗಳ ವಿವಿಧೆಡೆಯಿಂದ ಕಾನ್ಫರೆನ್ಸ್ ಕಾಲ್ ನಲ್ಲಿ ಸಂಭಾಷಣೆ ನಡೆಸಲಾಗಿದೆ. ಗೌರಿ ಲಂಕೇಶ್ ಹತ್ಯೆಯಾದ ನಂತರ ಈ ದೂರವಾಣಿ ಸಂಖ್ಯೆಯಿಂದ ಯಾವುದೇ ಕರೆಗಳು ಹೋಗಲಿಲ್ಲ. ಜೊತೆಗೆ ಸಿಮ್ ಸ್ಥಗಿತಗೊಂಡಿದೆ ಎಂದು ತನಿಖಾಧಿಕಾರಿಗಳಿಗೆ ಗೊತ್ತಾಗಿದೆ. ಈ ಮೊಬೈಲ್ ಸಿಮ್ ನ ಮಾಹಿತಿ ಸಂಗ್ರಹಿಸಿದಾಗ ನಕಲಿ ವಿಳಾಸ ನೀಡಿ ಸಿಮ್ ಖರೀದಿಸಿರುವುದು ಪತ್ತೆಯಾಗಿದೆ. ಅದೇ ಜಾಡಿನಲ್ಲಿ ತನಿಖೆ ಮುಂದುವರೆಸಿರುವ ತನಿಖಾ ದಳದ ಅಧಿಕಾರಿಗಳು ಸಿಮ್ ನ ಎಲ್ಲ ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ಈ ಕಾನ್ಫರೆನ್ಸ್ ಕರೆಯ ಸಂಪೂರ್ಣ ಮಾಹಿತಿ ದೊರೆತರೆ ಹಂತಕರ ಸುಳಿವು ಪತ್ತೆ ಹಚ್ಚಬಹುದು ಎಂದು ಸಿಟ್ ಮೂಲಗಳು ತಿಳಿಸಿವೆ.

Courtesy: Dailyhunt

Comments