ಮೆಡಿಕಲ್ ಸೀಟು ಸಿಗದ ಕಾರಣ ಪತ್ನಿಗೆ ಬೆಂಕಿ ಹಚ್ಚಿ ಕೂಂದ ಪತಿರಾಯ

19 Sep 2017 1:15 PM | Crime
281 Report

ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆಯಲು ವಿಫಲಳಾದ ಪತ್ನಿಯನ್ನು ನಿರುದ್ಯೋಗಿ ಪತಿಯೋರ್ವ ಕೊಲೆಗೈದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗಳು ಹರಿಕಾಳನ್ನು ಆಕೆಯ ಪತಿ ರಿಶಿ ಕುಮಾರ್ ಕಿಚ್ಚಿಟ್ಟು ಸಾಯಿಸಿದ್ದಾನೆ ಎಂದು ಹರಿಕಾಳ ಹೆತ್ತವರು ಎಲ್‍ಬಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹರಿಕಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 (ಬಿ ) ಮತ್ತು 302ರಡಿಯಲ್ಲಿ ಕೇಸು ದಾಖಲಿಸಲಾಗಿದೆ.  2 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು. ಒಂದು ವರ್ಷದಿಂದ ಹಾರಿಕಾ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು. ಆದರೆ ಅವರಿಗೆ ಸೀಟು ಸಿಕ್ಕಿರಲಿಲ್ಲ. ಆಕೆಯ ಪತಿ ನಿರುದ್ಯೋಗಿಯಾಗಿದ್ದ. ಸೀಟು ಸಿಗದಿದ್ದಲ್ಲಿ ವಿಚ್ಛೇದನ ನೀಡುವುದಾಗಿಯೂ ಆತ ಬೆದರಿಸುತ್ತಿದ್ದ. ಈ ಬಗ್ಗೆ ಹಾರಿಕಾ ಪೋಷಕರಿಗೆ ತಿಳಿಸಿದ್ದರು. ಮೆಡಿಕಲ್ ಸೀಟು ಸಿಗದೇ ಇದ್ದುದರಿಂದ ಆತ ಹಾರಿಕಾರನ್ನು ಕೊಂದಿದ್ದಾನೆ ಎಂದು ಎಸಿಪಿ ವೇಣುಗೋಪಾಲ್ ರಾವ್ ಹೇಳಿದ್ದಾರೆ.

Courtesy: prajavani

Comments