ಸಿರಿಯಲ್ ಕಿಲ್ಲರ್ ಸೈನೈಡ್ ಮೋಹನ್ ಗೆ ಜೀವಾವಧಿ ಶಿಕ್ಷೆ

16 Sep 2017 3:15 PM | Crime
374 Report

ಇಡೀ ರಾಷ್ಟ್ರವೇ ಬೆಚ್ಚಿ ಬೀಳುವಂತೆ ಮಾಡಿದ ಸಿರಿಯಲ್ ಕಿಲ್ಲರ್ ಹಾಗು ಸರಣಿ ಅತ್ಯಾಚಾರಿ, ಕೊಲೆಗಾರ ಸೈನೈಡ್ ಮೋಹನ್ ಗೆ 4ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೆಕ್ಷನ್ 302 ರ ಅಡಿಯಲ್ಲಿ ಸೈನೈಡ್ ಮೋಹನ್ ಗೆ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂ. ದಂಡ ವಿಧಿಸಲಾಗಿದೆ ನ್ಯಾಯಾಧೀಶ ಡಿ. ಟಿ ಪುಟ್ಟರಂಗ ಸ್ವಾಮಿ ಅವರು ಆದೇಶ ಹೊರಡಿಸಿದರು.

ಸರಣಿ ಅತ್ಯಾಚಾರಿ, ಕೊಲೆಗಾರ ಸೈನೈಡ್ ಮೋಹನ್ 4ನೇ ಕೇಸಿನಲ್ಲೂ ದೋಷಿ ವೇಳೆ ಕೊಲೆ ,ಅತ್ಯಾಚಾರ ,ಚಿನ್ನಾಭರಣ ಲೂಟಿ , ಸೈನೆಡ್ ನೀಡಿರುವುದು ಹಾಗೂ ಸಾಕ್ಷಿ ನಾಶ ಮಾಡಿರುವ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಸೆಕ್ಷನ್ 302 ರ ಅಡಿಯಲ್ಲಿ ಸೈನೈಡ್ ಮೋಹನ್ ಗೆ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರು. ದಂಡ ವಿಧಿಸಲಾಗಿದೆ ನ್ಯಾಯಾಧೀಶ ಡಿ. ಟಿ ಪುಟ್ಟರಂಗ ಸ್ವಾಮಿ ಅವರು ಆದೇಶ ಹೊರಡಿಸಿದರು. ಈ ಹಿಂದಿನ ಪ್ರಕರಣದಲ್ಲಿ ಮೋಹನನಿಗೆ ಇದೇ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಿದೆ. ಈ ಪ್ರಕರಣದಲ್ಲೂ ಮರಣ ದಂಡನೆ ವಿಧಿಸುವಂತೆ ಸರ್ಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದರು. ಸ್ತ್ರೀ ಹತ್ಯೆಯ ಪ್ರಕರಣದ ಆರೋಪಿ ಒಬ್ಬನೇ ಆಗಿದ್ದರೂ, ಈ ಹಿಂದಿನ ಪ್ರಕರಣಗಳಿಗೆ ವಿಧಿಸಿದ ಶಿಕ್ಷೆಯ ಆಧಾರದಲ್ಲಿ ಈ ಪ್ರಕರಣಕ್ಕೆ ಶಿಕ್ಷೆ ವಿಧಿಸಲು ಬರುವುದಿಲ್ಲ. ಪ್ರತಿಯೊಂದು ಪ್ರಕರಣವೂ ಸ್ವತಂತ್ರವಾಗಿ ವಿಚಾರಣೆ ನಡೆಸುವುದರಿಂದ ಶಿಕ್ಷೆ ವಿಧಿಸಲಾಗುತ್ತದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. 

Courtesy: Dailyhunt

Comments