ಲಂಡನ್ ಮೆಟ್ರೊ ರೈಲು ನಿಲ್ದಾಣದ್ಲಲಿ ಭಾರೀ ಸ್ಫೋಟ , ಹಲವರಿಗೆ ಗಾಯ

15 Sep 2017 4:25 PM | Crime
412 Report

ಲಂಡನ್ ನಗರದ ಸುರಂಗ ಮಾರ್ಗದಲ್ಲಿರುವ ಪಾರ್ಸೋನ್ ಗ್ರೀನ್ ಎಂಬ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅನೇಕರು ಗಾಯಗೊಂಡಿದ್ದಾರೆ. ಮೆಟ್ರೊ ರೈಲಿನ ತಳಭಾಗದ ಬಕೆಟ್‍ನಲ್ಲಿ ಈ ಸ್ಫೋಟಕವನ್ನು ಇರಿಸಲಾಗಿತ್ತು. ಇದು ಭಯೋತ್ಪಾದಕರ ಕೃತ್ಯವೇ ಅಥವಾ ಬೇರೆ ಯಾವುದಾದರೂ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ, ಆದರೆ ಲಂಡನ್ ಆಂಬುಲೆನ್ಸ್ ಸೇವೆಯು "ಯಾವುದೇ ಜೀವಕ್ಕೆ ಬೆದರಿಕೆಯಿಲ್ಲ" ಎಂದು ದೃಢಪಡಿಸಸಿದೆ.

ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಲಂಡನ್ ನಗರದ ಸುರಂಗ ಮಾರ್ಗದಲ್ಲಿರುವ ಪಾರ್ಸೋನ್ ಗ್ರೀನ್ ಎಂಬ ರೈಲ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಶಸ್ತ್ರ ಪೊಲೀಸರು ಸೇರಿದಂತೆ ತುರ್ತು ಸೇವೆಗಳು ಪಾರ್ಸನ್ಸ್ ಗ್ರೀನ್ ನಿಲ್ದಾಣದಲ್ಲಿ ಇಂದು ಬೆಳ್ಳಗ್ಗೆ ಸುಮಾರು 8.20 ಗಂಟೆಗೆ ಎಚ್ಚರಗೊಂಡ ನಂತರ ದೃಶ್ಯಕ್ಕೆ ಧಾವಿಸಿವೆ. ಈ ಘಟನೆಯ ಬಗ್ಗೆ ಟ್ರಾನ್ಸ್ಪೋರ್ಟ್ ಫಾರ್ ಲಂಡನ್ ಟ್ವೀಟ್ ಮಾಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎರ್ಲ್ಸ್ ಕೋರ್ಟ್ ಮತ್ತು ವಿಂಬಲ್ಡನ್ ನಡುವಿನ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಗಾರ್ಡಿಯನ್ ವರದಿಯ ಪ್ರಕಾರ ಸ್ಫೋಟ ಸಂಭವಿಸುತ್ತಿದ್ದಂತೆಯೇ ಗಾಬರಿಗೊಂಡ ಪ್ರಯಾಣಿಕರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಕಾಲ್ತುಳಿತ ಉಂಟಾಗಿ ಹಲವರಿಗೆ ಗಾಯಗಳೂ ಆಗಿವೆ. ಮೆಟ್ರೋ ನಿಲ್ದಾಣದಲ್ಲಿ ಸ್ಫೋಟ ನಡೆದಿರುವುದನ್ನು ಉಗ್ರರ ಕೃತ್ಯ ಎಂದು ಘೋಷಿಸಲಾಗಿದೆ.

 

Courtesy: Dailyhunt

Comments