Report Abuse
Are you sure you want to report this news ? Please tell us why ?
ರವೀಂದ್ರ ಕಲಾಕ್ಷೇತ್ರದಲ್ಲಿಂದು ಗೌರಿ ಲಂಕೇಶ್ ಅಂತಿಮ ದರ್ಶನ
06 Sep 2017 10:04 AM | Crime
401
Report
ಬೆಂಗಳೂರು: ನಿನ್ನೆ ಗೌರಿ ಲಂಕೇಶ್ ಹತ್ಯೆಯಾಗಿದ್ದು, ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ಬಳಿಕ ಅಂದರೆ 11 ಗಂಟೆಯ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ, ಬಳಿಕ ಚಾಮರಾಜಪೇಟೆಯ ಬಳಿ ಚಿತಾಗಾರದಲ್ಲಿ ಅವರ ಅಂತ್ಯ ಕ್ರಿಯೆ ಮಾಡಲಾಗುವುದು ಅಂತಾ ಗೌರಿ ಲಂಕೇಶ್ ಅವರ ತಮ್ಮ ಇಂದ್ರಜಿತ್ ಲಂಕೇಶ್ ಅವರು ತಿಳಿಸಿದ್ದಾರೆ.
ಇದೇ ವೇಳೆ ಅವರು ಗೌರಿ ಅವರ ಹತ್ಯೆಯ ಸಂಪೂರ್ಣ ಸಿಸಿಟಿವಿಯಲ್ಲಿ ಚಿತ್ರಣ ಸೆರೆಯಾಗಿದ್ದು, ಆರೋಪಿಗಳ ಚಹರೆ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಅಂತಾ ಹೇಳಿದ್ದಾರೆ.
Edited By
venki swamy




Comments