ಪೊಲೀಸ್ ಅಧಿಕಾರಿ ಗಣಪತಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ- ಸುಪ್ರಿಂ ಆದೇಶ, ಬಿಜೆಪಿಗೆ ಮತ್ತಷ್ಟು ಬಲ?

05 Sep 2017 3:43 PM | Crime
411 Report

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಕಾರ್ಯ ವೈಫಲ್ಯ ಖಂಡಿಸಿ ಮಂಗಳೂರು ಚಲೋ ಹಮ್ಮಿಕೊಂಡಿರುವಾಗಲೇ ಇತ್ತ ನಿಷ್ಠಾವಂತ ಪೊಲೀಸ್ ಅಧಿಕಾರಿ ಗಣಪತಿ ಸಾವಿನ ಪ್ರಕರಣವನ್ನು ಸುಪ್ರಿಂ ಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ. ಇದರಿಂದ ಬಿಜೆಪಿ ಹೋರಾಟಕ್ಕೆ ಮತ್ತಷ್ಟು ಬಲ ಬಂದತಾಗಿದೆ.

ಸುಪ್ರಿಂ ಆದೇಶವನ್ನು ಸ್ವಾಗತಿಸಿರುವ ಹಲವು ರಾಜ್ಯ ಬಿಜೆಪಿ ನಾಯಕರು, ಇದು ಸತ್ಯಕ್ಕೆ ತಂದ ಜಯ ಎಂದು ಬಿಎಸ್ ವೈ ಹೇಳಿದ್ದಾರೆ. ನಿಷ್ಠಾವಂತ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್ ಹೆಸರು ತಳಕು ಹಾಕಿಕೊಂಡಿತ್ತು, ಆದ್ದರಿಂದ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಸುಪ್ರಿಂಕೋರ್ಟ್ ನೀಡಿದ ಮಹತ್ವದ ಆದೇಶದಲ್ಲೇನಿದೆ.

ನ್ಯಾಯಮೂರ್ತಿ ಯು.ಲಲಿತ್ ನೇತೃತ್ವದ ಪೀಠದಿಂದ ಆದೇಶ
ಸಿಬಿಐ ತನಿಖೆಗೆ ಅರ್ಜಿ ಸಲ್ಲಿಸಿದ್ದ ಗಣಪತಿ ಕುಟುಂಬ
ಸಿಐಡಿ ತನಿಖೆ ಬಗ್ಗೆ ಸುಪ್ರಿಂಕೋರ್ಟ್ ಅಸಮಾಧಾನ
ಇತ್ತೀಚೆಗಷ್ಟೇ ಸಾಕ್ಷ್ಯ ನಾಪತ್ತೆಯಾದ ಬಗ್ಗೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು.
ಪೆನ್ ಡ್ರೈವ್, ಕಾಲ್ ಡಿಟೇಲ್ಸ್ ಡಿಲೀಟ್ ಆಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು,

Edited By

venki swamy

Reported By

Sudha Ujja

Comments