ಮಹಾರಾಷ್ಟ್ರದ ಮುಂಬೈನಲ್ಲಿ ಮತ್ತೊಂದು ರೈಲು ಅಪಘಾತ

25 Aug 2017 12:56 PM | Crime
306 Report

ಮುಂಬೈ: ಕೆಲ ದಿನಗಳ ಹಿಂದೆಷ್ಟೇ ಉತ್ತರಪ್ರದೇಶದಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ಹಳಿ ತಪ್ಪಿ 24 ಜನರು ಸಾವನ್ನಪ್ಪಿದ್ದರು. ಈ ಅಪಘಾತದ ಬೆನ್ನಲ್ಲೇ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ರೈಲೊಂದು ಹಳಿ ತಪ್ಪಿದೆ. ಮಹಿಮಾ ಬಳಿ ಅಂಧೇರಿ ಮತ್ತು ಛತ್ರಪತಿ ಟರ್ಮಿನಲ್ ನಡುವೆ ಸಂಚಾರ ಮಾಡುವ ನಾಲ್ಕು ಬೋಗಿಗಳು ಹಳಿ ತಪ್ಪಿವೆ.

ಮುಂಬೈ: ಕೆಲ ದಿನಗಳ ಹಿಂದೆಷ್ಟೇ ಉತ್ತರಪ್ರದೇಶದಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ಹಳಿ ತಪ್ಪಿ 24 ಜನರು ಸಾವನ್ನಪ್ಪಿದ್ದರು. ಈ ಅಪಘಾತದ ಬೆನ್ನಲ್ಲೇ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ರೈಲೊಂದು ಹಳಿ ತಪ್ಪಿದೆ. ಮಹಿಮಾ ಬಳಿ ಅಂಧೇರಿ ಮತ್ತು ಛತ್ರಪತಿ ಟರ್ಮಿನಲ್ ನಡುವೆ ಸಂಚಾರ ಮಾಡುವ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಆದ್ರೆ ಸದ್ಯ ಯಾವುದೇ ಸಾವು -ನೋವು ಸಂಭವಿಸಿಲ್ಲ. ಇವತ್ತು ಬೆಳಿಗ್ಗೆ 9:5ರ ಸುಮಾರಿಗೆ ಈ ಅಪಘಾತ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದರಿಂದ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು, ಸ್ಥಳಕ್ಕೆ ಆಗಮಿಸಿದ ರೈಲ್ವೆ ಕಾರ್ಮಿಕರು ದುರಸ್ಥಿ ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Edited By

venki swamy

Reported By

Sudha Ujja

Comments

Cancel
Done